alex Certify
ಕನ್ನಡ ದುನಿಯಾ       Mobile App
       

Kannada Duniya

9000 ರನ್ : ದಾದಾ ದಾಖಲೆ ಮುರಿದ ಡಿ ವಿಲಿಯರ್ಸ್

d-v-liyar

ವೆಲ್ಲಿಂಗ್ಟನ್: ಏಕದಿನ ಪಂದ್ಯಗಳಲ್ಲಿ ಅತಿ ವೇಗವಾಗಿ 9000 ರನ್ ಗಳಿಸುವ ಮೂಲಕ, ಸೌತ್ ಆಫ್ರಿಕಾ ಬ್ಯಾಟ್ಸ್ ಮನ್ ಎ.ಬಿ. ಡಿ ವಿಲಿಯರ್ಸ್ ದಾಖಲೆ ಬರೆದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ 3 ನೇ ಪಂದ್ಯದಲ್ಲಿ ಅವರು 85 ರನ್ ಗಳಿಸಿ, 9000 ರನ್ ಗಡಿ ದಾಟಿದ್ದಾರೆ.

214 ಪಂದ್ಯ, 205 ಇನ್ನಿಂಗ್ಸ್ ಗಳಲ್ಲಿ 53.86 ಸರಾಸರಿಯಲ್ಲಿ ಅವರು 9000 ರನ್ ಕಲೆಹಾಕಿದ್ದಾರೆ. ಅವರು 100 ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 9000 ರನ್ ಗಳಿಸಿದ ವಿಶ್ವದ 18 ನೇ ಹಾಗೂ ಸೌತ್ ಆಫ್ರಿಕಾದ 2 ನೇ ಆಟಗಾರನಾಗಿದ್ದಾರೆ.

ಭಾರತದ ಸೌರವ್ ಗಂಗೂಲಿ ಅತಿವೇಗವಾಗಿ 9000 ರನ್ ಕಲೆಹಾಕಿದ್ದರು. 236 ಪಂದ್ಯಗಳಲ್ಲಿ ಅವರು ಈ ಸಾಧನೆ ಮಾಡಿದ್ದು, ಅದನ್ನು ಡಿ ವಿಲಿಯರ್ಸ್ ಹಿಂದಿಕ್ಕಿದ್ದಾರೆ.

 

Player Opposition Matches Innings
AB de Villiers New Zealand 214 205
Sourav Ganguly Australia 236 228
Sachin Tendulkar South Africa 242 235
Brian Lara Australia 246 239
Ricky Ponting South Africa 248 242
Jacques Kallis England 256 242

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...