alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ಬಿಟ್ಟು ಐಪಿಎಲ್ ಮೈದಾನಕ್ಕೆ ಬಂದ ಆಟಗಾರ

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಲು ಪ್ರತಿಯೊಬ್ಬ ಆಟಗಾರನೂ ಉತ್ಸುಕನಾಗಿರ್ತಾನೆ. ರಾತ್ರೋ ರಾತ್ರಿ ಹೆಸರು ಮಾಡಲು ಇದೊಂದು ಅದ್ಭುತ ವೇದಿಕೆ. ಹಾಗಾಗಿಯೇ ಐಪಿಎಲ್ ಗಾಗಿ ಆಟಗಾರರು ಸದಾ ಸಿದ್ಧರಿರ್ತಾರೆ. ಇದಕ್ಕಾಗಿ ಏನು ಬೇಕಾದ್ರೂ ತೊರೆಯಲು ಸಿದ್ಧರಿರ್ತಾರೆ. ಇದಕ್ಕೆ ಆಸ್ಟ್ರೇಲಿಯಾದ ಬ್ಯಾಟ್ಸ್ ಮೆನ್ ಆರನ್ ಫಿಂಚ್ ಉತ್ತಮ ನಿದರ್ಶನ.

ಆರನ್ ಫಿಂಚ್ ಮದುವೆ ನಂತ್ರ ನೇರವಾಗಿ ಐಪಿಎಲ್ ಗೆ ಬಂದಿದ್ದಾರೆ. ಐಪಿಎಲ್ ನಲ್ಲಿ ಮಿಂಚಲು ಆರನ್ ಫಿಂಚ್ ಹನಿಮೂನ್ ತೊರೆದಿದ್ದಾರೆ. ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಆರನ್ ಫಿಂಚ್ ಅವರನ್ನು ತನ್ನ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ. ಆರನ್ ಫಿಂಚ್ ಪಂಜಾಬ್ ಪರ ಮೈದಾನಕ್ಕಿಳಿಯುತ್ತಿದ್ದಾರೆ.

ಮದುವೆ ಹಿನ್ನೆಲೆಯಲ್ಲಿ ಆರನ್ ಫಿಂಚ್ ಮೊದಲ ಪಂದ್ಯವನ್ನಾಡಲಿಲ್ಲ. ಆದ್ರೀಗ ಭಾರತಕ್ಕೆ ಬಂದಿರುವ ಫಿಂಚ್ ನೆಟ್ ಪ್ರಾಕ್ಟಿಸ್ ಶುರು ಮಾಡಿದ್ದಾರೆ. ಫಿಂಚ್ ಏಪ್ರಿಲ್ 7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಐಪಿಎಲ್ ನಲ್ಲಿ 65 ಪಂದ್ಯಗಳನ್ನು ಆಡಿರುವ ಫಿಂಚ್ ಈವರೆಗೆ 1604 ರನ್ ಗಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...