alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೀರ್ ಔತಣಕೂಟದಲ್ಲಿ ಜಾದು ಕಲಿತ ಸಚಿನ್ ತೆಂಡೂಲ್ಕರ್

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗಾಗಿ ಸೋಮವಾರ ಔತಣ ಕೂಟವೊಂದನ್ನು ಏರ್ಪಡಿಸಿದ್ದರು. ಅಮೀರ್ ಮನೆಯಲ್ಲಿ ಏರ್ಪಡಿಸಿದ್ದ ಈ ಔತಣ ಕೂಟಕ್ಕೆ ಸಚಿನ್ ತೆಂಡೂಲ್ಕರ್ ಪತ್ನಿ ಅಂಜಲಿ ಜೊತೆ ಬಂದಿದ್ದರು.

ಪಾರ್ಟಿಗೆ ವರುಣ್ ಧವನ್, ಫಾತಿಮಾ ಸನಾ ಶೇಖ್, ನಿರ್ದೇಶಕ ಅಶುತೋಷ್ ಗೋವಾರಿಕರ್ ಆಗಮಿಸಿದ್ದರು. ಔತಣ ಕೂಟದಲ್ಲಿ ಗಮನ ಸೆಳೆದಿದ್ದು ಜಾದು. ಅಮೀರ್ ಖಾನ್ ಮನೆಗೆ ಜಾದುಗಾರರೊಬ್ಬರನ್ನು ಕರೆಸಿದ್ದರು. ಜಾದುಗಾರ ತಾನು ಜಾದು ಮಾಡಿದ್ದಲ್ಲದೆ ಅಮೀರ್ ಖಾನ್ ಹಾಗೂ ಸಚಿನ್ ಗೆ ಜಾದು ಕಲಿಸಿದ್ರು.

ಫಾತಿಮಾ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಸಚಿನ್ ಜಾದು ಮಾಡಿದ ಕೆಲ ವಿಡಿಯೋಗಳನ್ನು ಹಾಕಿದ್ದಾರೆ. ಸದಾ ಬ್ಯಾಟು, ಬಾಲ್ ಕೈನಲ್ಲಿ ಹಿಡಿಯುತ್ತಿದ್ದ ಸಚಿನ್ ಕೈನಲ್ಲಿ ಇದೇ ಮೊದಲ ಬಾರಿ ಕಾರ್ಡ್ ಕಾಣಿಸಿದೆ. ಸಚಿನ್ ಜೊತೆ ವರುಣ್ ಧವನ್ ಕೂಡ ಜಾದು ಮಾಡಿದ್ದಾರೆ.

ಅಮೀರ್ ಖಾನ್ ಯಾವ ಕಾರಣಕ್ಕೆ ಈ ಔತಣ ಕೂಟ ಏರ್ಪಡಿಸಿದ್ದರು ಎಂಬುದು ಬಹಿರಂಗವಾಗಿಲ್ಲ. ಆದ್ರೆ ಕೂಟದಲ್ಲಿ ಎಲ್ಲರೂ ಎಂಜಾಯ್ ಮಾಡಿದ್ದಾರೆಂಬುದು ಫೋಟೋ ನೋಡಿದ್ರೆ ಗೊತ್ತಾಗುತ್ತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...