alex Certify
ಕನ್ನಡ ದುನಿಯಾ       Mobile App
       

Kannada Duniya

ಆಭರಣ ಮಾರಿ ಮಗಳ ಕ್ರೀಡೆಗೆ ಪ್ರೋತ್ಸಾಹ ನೀಡಿದ ಮಹಾತಾಯಿ…!

ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡುವ ಕ್ರೀಡಾಪಟುವಿಗೆ ಬಂಗಾರದ ಕನಸು ಇದ್ದೇ ಇರುತ್ತದೆ. ಈ ಸ್ಥಾನಕ್ಕೆ ಮುಟ್ಟಲು ಪ್ರತಿಯೊಬ್ಬ ಅಥ್ಲೀಟ್ ಕಲ್ಲು ಮುಳ್ಳಿನ ಹಾದಿಯನ್ನು ಕ್ರಮಿಸಿ ಬಂದಿರುತ್ತಾರೆ. ಅದರ ಫಲವಾಗಿ ಪೋಡಿಯಂ ನಲ್ಲಿ ಮೊದಲ ಗೌರವ ದಕ್ಕುತ್ತದೆ.

ಸ್ಯಾವೇಟ್ ಚ್ಯಾಂಪಿಯನ್ ಶಿಪ್ ನ 55 ಕೆ.ಜಿ. ವಿಭಾಗದ ಕಿಕ್ ಬಾಕ್ಸಿಂಗ್ ನಲ್ಲಿ ಸ್ವರ್ಣ ಸಾಧನೆ ಮಾಡಿದ ಹೆಗ್ಗಳಿಕೆ ಟ್ರೇಸಿ ದಾರ್ಲೊಂಗ್ ಅವರದ್ದಾಗಿದೆ. ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕದ ಮಾಲೆ ತೊಡಿಸುವ ಆಸೆ ಟ್ರೇಸಿಗಿದೆ.

ತ್ರಿಪುರಾದ ಟ್ರೇಸಿಗೆ ರಾಷ್ಟ್ರೀಯ ಕೂಟದಲ್ಲಿ ಭಾಗವಹಿಸಲು ಆರ್ಥಿಕ ಮುಗಟ್ಟು ಎದುರಾಯಿತು. ಇದನ್ನು ಮನಗೊಂಡು ಟ್ರೇಸಿ ಅವರ ತಾಯಿ ಆಭರಣವನ್ನು ಮಾರಿ ಹಣ ಹೊಂದಿಸಿಕೊಟ್ಟಿದ್ದಾರೆ. ತಂದೆಯನ್ನು ಕಳೆದುಕೊಂಡ ಮಗಳಿಗೆ ತಾಯಿ, ಎರಡೂ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದಾರೆ.

ಟ್ರೇಸಿ ತಾಯಿ, ಆಶಾ ಕಾರ್ಯಕರ್ತೆ. ಇವರಿಗೆ ತಿಂಗಳಿಗೆ 2 ಸಾವಿರ ಸಂಬಳ. ತನ್ನ ಕಷ್ಟವನ್ನು ತೋರ್ಪಡಿಸಿಕೊಳ್ಳದ ಈ ಮಹಾತಾಯಿ, ಮಗಳ ಕನಸಿಗೆ ಆಭರಣ ಮಾರಿ ಪ್ರೋತ್ಸಾಹ ನೀಡಿದ್ದಾರೆ.

ಟ್ರೇಸಿ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಕಿಕ್ ಬಾಕ್ಸಿಂಗ್ ನಲ್ಲಿ ಎಲ್ಲಿಲ್ಲದ ಆಸಕ್ತಿ. ಇವರ ಪ್ರತಿಭೆ ಕೋಚ್ ಪಿನಾಕಿ ಚಕ್ರವರ್ತಿ ಕಣ್ಣಿಗೆ ಬೀಳುತ್ತಲೇ, ಟ್ರೇಸಿ ಲಕ್ ಬದಲಾಗಿದೆ. ಈವರೆಗೆ ಟ್ರೇಸಿ ಐದು ಬಂಗಾರದ ಪದಕ ಗೆದ್ದು ಬೀಗಿದ್ದಾರೆ. ತ್ರಿಪುರಾ ಸರ್ಕಾರ ಟ್ರೇಸಿಯವರಿಗೆ ಸಹಾಯ ಮಾಡಲು ಮುಂದಾಗಿದೆ. ಅಲ್ಲದೆ ಅಗತ್ಯ ಸವಲತ್ತುಗಳನ್ನು ನೀಡುವ ಆಶ್ವಾಸನೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...