alex Certify
ಕನ್ನಡ ದುನಿಯಾ       Mobile App
       

Kannada Duniya

ಟೆನಿಸ್ ಕೋರ್ಟ್ ನಲ್ಲೇ ಆಟಗಾರನಿಂದ ಪ್ರೇಮ ನಿವೇದನೆ 

ಚೀನಾದ 24 ವರ್ಷದ ಟೆನಿಸ್ ಆಟಗಾರ ಯೆಕೊಂಗ್, ಶೆನ್ಜೆನ್ ಓಪನ್ ಟೂರ್ನಿಯಲ್ಲಿ ತಮ್ಮ ಆಟದ ಮೂಲಕ ಸುದ್ದಿ ಮಾಡಬೇಕಿತ್ತು. ಆದ್ರೆ, ಯೆಕೊಂಗ್ ಟೆನಿಸ್ ಕೋರ್ಟ್ ನಲ್ಲಿ ತಮ್ಮ ಪ್ರೇಮ ನಿವೇದನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಹೌದು….ಯೆಕೊಂಗ್ ಚೀನಾದ ಭರವಸೆಯ ಆಟಗಾರ. ಹಲವು ಎ.ಟಿ.ಪಿ ಟೂರ್ನಿಯಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಹಲವು ಬಾರಿ ಅರ್ಹತಾ ಸುತ್ತಿನಲ್ಲೇ ನಿರಾಸೆ ಅನುಭವಿಸಿರುವ ಯೆಕೊಂಗ್, ಇದೇ ಮೊದಲ ಬಾರಿಗೆ ಪ್ರಧಾನ ಘಟ್ಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಸವಿ ನೆನಪನ್ನು ಮತ್ತಷ್ಟು ಅವಿಸ್ಮರಣೀಯವಾಗಿಸಲು, ಯೆಕೊಂಗ್ ತನ್ನ ಮನದೊಡತಿಗೆ ಪ್ರೇಮ ಪ್ರಸ್ತಾಪ ಮಾಡಿದ್ದಾರೆ.

ಮಹತ್ವದ ಪಂದ್ಯದಲ್ಲಿ ಜಯ ಸಾಧಿಸುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯತ್ತ ಬಂದ ಯೆಕೊಂಗ್, ಮಂಡಿಯೂರಿ ಕುಳಿತು, ಬಹು ದಿನಗಳಿಂದ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡ ಭಾವನೆಯನ್ನು ಹೊರ ಹಾಕಿದ್ದಾರೆ. ಯೆಕೊಂಗ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ, ತಮ್ಮ ಪ್ರೇಯಸಿಗೆ ಪ್ರಪೋಸ್ ಮಾಡಿದ್ರು.

ಬಹುದಿನಗಳಿಂದ ಪ್ರೀತಿಯ ಪ್ರಸ್ತಾಪ ಮಾಡುವ ನಿರ್ಧಾರ ಮಾಡಿಕೊಂಡಿದ್ದೇ. ಆದ್ರೆ, ಇದೇ ಸರಿಯಾದ ಸಮಯವೆಂದು ಅರಿತು, ಪ್ರಪೋಸ್ ಮಾಡಿದ್ದೇನೆ ಎಂದು ಯೆಕೊಂಗ್ ತಿಳಿಸಿದ್ದಾರೆ. ಅಂದಹಾಗೆ ಯೆಕೊಂಗ್ ಪ್ರಿಯತಮೆ ಸಹ ಅಥ್ಲೀಟ್. ನಿವೃತ್ತಿ ಹೊಂದಿರುವ ಅವರು ಸದ್ಯ ಈಜು ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...