alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಬಿಡ್ಡಿಂಗ್ ನಂತ್ರ ಈ ಕ್ರಿಕೆಟರ್ ಗೆ ಹುಡುಗಿ ಕಳಿಸ್ತಿದ್ಲಂತೆ ನಿರಂತರ ಮೆಸ್ಸೇಜ್

ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶ್ರೇಯಸ್ ಅಯ್ಯರ್ ಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಹತ್ವದ ಸಲಹೆ ನೀಡಿದ್ದಾರಂತೆ. ಆಟದ ಮೇಲೆ ಏಕಾಗ್ರತೆ ಬರಬೇಕೆಂದ್ರೆ ಮಾಧ್ಯಮಗಳಿಂದ ಹಾಗೂ ಸಾಮಾಜಿಕ ಜಾಲತಾಣದಿಂದ ಆದಷ್ಟು ದೂರವಿರು ಎಂದು ಧೋನಿ ಸಲಹೆ ನೀಡಿದ್ದಾರಂತೆ.

ಓಪನ್ ಹೌಸ್ ವಿತ್ ರೆನಿಲ್ ನಲ್ಲಿ ಪಾಲ್ಗೊಂಡಿದ್ದ ಶ್ರೇಯಸ್, ಸಾಮಾಜಿಕ ಜಾಲತಾಣಗಳು ಜೀವನದ ಪ್ರಮುಖ ಭಾಗವಾಗಿದೆ. ಇದನ್ನು ನಾನು ಚೆನ್ನಾಗಿ ನಿರ್ವಹಿಸುವ ಯತ್ನ ನಡೆಸುತ್ತಿದ್ದೇನೆ. ಟೀಕೆಗಳು ನನಗೆ ಮುಂದೆ ಹೋಗುವ ಪ್ರೇರಣೆ ನೀಡುತ್ತವೆ ಎಂದಿದ್ದಾರೆ.

ಸಂದರ್ಶನದಲ್ಲಿ ಆಸಕ್ತಿದಾಯಕ ಕಥೆಯನ್ನು ಶ್ರೇಯಸ್ ಹೇಳಿದ್ದಾರೆ. ಐಪಿಎಲ್ ನಲ್ಲಿ ಶ್ರೇಯಸ್ ಸ್ಥಾನ ಪಡೆಯುತ್ತಿದ್ದಂತೆ ಸ್ನೇಹಿತೆಯೊಬ್ಬಳು ಸಂದೇಶ ಕಳುಹಿಸಲು ಶುರು ಮಾಡಿದ್ದಳಂತೆ. ಶ್ರೇಯಸ್ ಜೊತೆ ಮಾತನಾಡಲು ಬಯಸಿದ್ದಳಂತೆ. ಹೀಗೇಕೆ ಮಾಡ್ತಿದ್ದೀಯಾ ಎಂಬ ಪ್ರಶ್ನೆಗೆ ಆಕೆ ನಿನ್ನ ನೋಡಿದ್ರೆ ನನಗೆ ಖುಷಿಯಾಗುತ್ತೆ ಎಂದಿದ್ದಳಂತೆ. ಆಕೆ ನನ್ನ ಹಿಂದಲ್ಲ, ಹಣದ ಹಿಂದೆ ಬಿದ್ದಿದ್ದಾಳೆಂಬುದು ನನಗೆ ಆಗ್ಲೇ ಗೊತ್ತಾಯ್ತು ಎಂದು ಶ್ರೇಯಸ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...