alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಗಿತ್ತು ಗೊತ್ತಾ ಕ್ರೋವೇಷಿಯಾದಲ್ಲಿ ಫುಟ್ಬಾಲ್ ಕ್ರೇಜ್

ಫಿಫಾ ವಿಶ್ವಕಪ್‌ಗೆ ಭಾನುವಾರ ತೆರೆ ಬಿದ್ದಿದೆ. ವಿಶ್ವದ ಶ್ರೀಮಂತ ಕ್ರೀಡೆಗಳಲ್ಲಿ ಒಂದಾದ ಫುಟ್ಬಾಲ್, ವಿಶ್ವದ ಅಭಿಮಾನಿಗಳಿಗೆ ಒಂದು ತಿಂಗಳು ಮನೋರಂಜನೆ ನೀಡಿದೆ. ಈ ರಸಮಯ ಸಮಯವನ್ನು ಸವಿಯಲು ಭಾರತದ ಫುಟ್ಬಾಲ್ ಅಭಿಮಾನಿಗಳು ರಷ್ಯಾಗೆ ಹೋಗಿದ್ದರು. ಕೆಲವರು ರಜೆಯ ಮಜೆಯನ್ನು ಸವಿಯಲು ವಿದೇಶಕ್ಕೆ ಪ್ರಯಾಣ ಬೆಳಿಸಿದ್ದರು.

ದೆಹಲಿಯ ಕುಟುಂಬವೊಂದು ಕ್ರೊವೇಷಿಯಾಕ್ಕೆ ಭೇಟಿ ನೀಡಿತ್ತು. ಈ ವೇಳೆ ಅಲ್ಲಿನ ಫುಟ್ಬಾಲ್ ಕ್ರೇಜ್‌ ಗೆ ಮನಸೋತಿದ್ದಾರೆ. ಕ್ರೊವೇಷಿಯಾದ ಸ್ಟೋನ್ ಮಲಿ ಎಂಬಲ್ಲಿ ಎಲ್ಲಿ ನೋಡಿದ್ರು ಫುಟ್ಬಾಲ್ ಅಭಿಮಾನಿಗಳೇ….ನೇರ ಪ್ರಸಾರದ ಪಂದ್ಯ ನೋಡಲು ಜಮಾಯಿಸಿದ್ದರು. ಎಲ್ಲರೂ ತಮ್ಮ ದೇಶದ ಜೆರ್ಸಿ ತೊಟ್ಟು ಬಂದವರೇ. ಕಣ್ಣಾಯಿಸಿದ ಕಡೆಯಲ್ಲಾ ಕಾಣೋದು ಹೆಚ್ಚಾಗಿ ಎರಡೇ ಬಣ್ಣ. ಕೆಂಪು ಹಾಗೂ ಬಿಳಿ.

ಕ್ರೊವೇಷಿಯಾ ಅಭಿಮಾನಿಗಳಲ್ಲಿ ತಮ್ಮ ತಂಡ ಈ ಹಂತಕ್ಕೆ ಬಂದಿದ್ದಕ್ಕೆ ಸಂತಸ…ಇನ್ನು ಚೊಚ್ಚಲ ಪ್ರಶಸ್ತಿಗೆ ಮುತ್ತಿಡಲಿ ಎಂಬ ಆಶಯ. ಎಲ್ಲೆಂದರಲ್ಲಿ ದೊಡ್ಡ ಪರದೆಗಳು. ಜನ ಸಂಖ್ಯೆಯಲ್ಲಿ ಚಿಕ್ಕ ರಾಷ್ಟ್ರವಾದ್ರೂ, ಈ ಜನರ ಫುಟ್ಬಾಲ್ ಪ್ರೀತಿ ಎಂತಹದ್ದು ಎಂದು ನೋಡಲು ಒಳ್ಳೆಯ ಅವಕಾಶ.

ಕಾಫಿ ಬಾರ್, ಪಬ್‌ಗಳು ಸಹ ವಿಶೇಷವಾಗಿ ಅಲಂಕಾರಗೊಂಡಿದ್ದವು. ಅಲ್ಲದೆ ಫುಟ್ಬಾಲ್ ಪ್ರೇಮಿಯನ್ನ ಕೈ ಬೀಸಿ ಕರೆಯುತ್ತಿದ್ದವು. ತಂಡ ಗೋಲು ಬಾರಿಸಿದ್ರೆ, ಎದುರಾಳಿಗಳ ಗೋಲ್ ತಡೆದ್ರೆ ಸಿಳ್ಳೆ ಚಪ್ಪಾಳೆಗಳ ಸದ್ದು ಇಮ್ಮಡಿಗೊಳ್ಳುತ್ತಿತ್ತು. ಫುಟ್ಬಾಲ್ ಫೈನಲ್‌ನಲ್ಲಿ ನಮ್ಮ ತಂಡ ಸೋತ ಬಗ್ಗೆ ಬೇಸರ ಇಲ್ಲ. ಐತಿಹಾಸಿಕ ಸಾಧನೆ ಮಾಡಿದ ಹೆಮ್ಮೆ ಇದೆ ಎನ್ನುವ ಮಾತುಗಳು ಸಾಮಾನ್ಯವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...