alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಕ್ ಬಾಕ್ಸಿಂಗ್ ನಲ್ಲಿ ಚಾಂಪಿಯನ್ ಆದ ಕಾಶ್ಮೀರಿ ಬಾಲೆ

kashmir-girl

ಶ್ರೀನಗರ: ಸದಾಕಾಲ ಉಗ್ರರ ದಾಳಿ, ಸೇನೆಯ ಕಾರ್ಯಾಚರಣೆ, ಬಾಂಬ್ ಸದ್ದುಗಳಿಂದ ಸುದ್ದಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಬಾಲಕಿಯೊಬ್ಬಳು ಅಮೋಘ ಸಾಧನೆ ಮಾಡಿದ್ದಾಳೆ.

8 ವರ್ಷದ ಕಾಶ್ಮೀರಿ ಬಾಲೆ ತಜಾಮುಲ್ ಇಟಲಿಯ ಆಂಡ್ರಿಯಾದಲ್ಲಿ ನಡೆದ, ವಿಶ್ವ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ. 90 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ತಜಾಮುಲ್ ಅಮೆರಿಕದ ಸ್ಪರ್ಧಿಯನ್ನು ಸೋಲಿಸುವ ಮೂಲಕ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದಾಳೆ. ಸಬ್ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿ ದಾಖಲೆ ಮಾಡಿದ್ದಾಳೆ.

ಕೋಚ್ ಮಾಸ್ಟರ್ ಫಾಸಿಲ್ ಅಲಿ ದಾರ್ ಮತ್ತು ಚಾಲಕ ವೃತ್ತಿಯಲ್ಲಿರುವ ಗುಲಾಂ ಮೊಹಮ್ಮದ್ ಲೋನ್ ಅವರ ಪ್ರೋತ್ಸಾಹದಿಂದ ತಜಾಮುಲ್ ಸಾಧನೆ ಮಾಡಿದ್ದಾಳೆ.

ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಬ್ ಜೂನಿಯರ್ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ನಂತರ, ತರಬೇತುದಾರರಿಂದ ಉತ್ತಮ ಕೌಶಲ್ಯ ಪಡೆದುಕೊಂಡಿದ್ದು, ಈಗ ವಿಶ್ವ ಚಾಂಪಿಯನ್ ಆಗಿದ್ದಾಳೆ. ಬಾಂಡೀಪುರ್ ಶಾಲೆಯಲ್ಲಿ 2 ನೇ ತರಗತಿ ಓದುತ್ತಿರುವ ತಜಾಮುಲ್, ಇನ್ನೂ ಸಾಧನೆ ಮಾಡುವ ಹಂಬಲ ವ್ಯಕ್ತಪಡಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...