alex Certify
ಕನ್ನಡ ದುನಿಯಾ       Mobile App
       

Kannada Duniya

ಚೆನ್ನೈ ಕ್ರಿಕೆಟ್ ಪಂದ್ಯದ ಟಿಕೆಟ್ ಶೇ. 53 ರಷ್ಟು ಏರಿಕೆ

ಚೆನ್ನೈ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ) ಜುಲೈ 1 ರಿಂದ ಜಾರಿಯಾಗಿದ್ದು, ಕ್ರಿಕೆಟ್ ಪಂದ್ಯಗಳ ಟಿಕೆಟ್ ಮೇಲೆಯೂ ತೆರಿಗೆ ವಿಧಿಸಲಾಗುತ್ತಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ನಡೆಯಲಿರುವ ಏಕದಿನ ಪಂದ್ಯದ ಟಿಕೆಟ್ ಬೆಲೆ ಜಾಸ್ತಿಯಾಗಿದೆ. ಶೇ. 28 ರಷ್ಟು ಜಿ.ಎಸ್.ಟಿ. ಸೇರ್ಪಡೆಯಾಗಿ ಟಿಕೆಟ್ ಬೆಲೆ ದುಬಾರಿಯಾಗಿದೆ ಎಂದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು.

ಈಗ ಚೆನ್ನೈ ಸರದಿ. ಚೆನ್ನೈನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವಿನ ಏಕದಿನ ಪಂದ್ಯದ ಟಿಕೆಟ್ ಬೆಲೆ ಶೇ. 53 ರಷ್ಟು ಏರಿಕೆಯಾಗಿದೆ.

ಶೇ. 28 ರಷ್ಟು ಜಿ.ಎಸ್.ಟಿ. ಹಾಗೂ ಸ್ಥಳೀಯ ಪುರಸಭೆ ಕೂಡ ಸುಂಕ ವಿಧಿಸುವುದರಿಂದ ಶೇ. 53 ರಷ್ಟು ಟಿಕೆಟ್ ಬೆಲೆ ಏರಿಕೆಯಾಗಿದೆ. 750 ರೂ. ಟಿಕೆಟ್ ಬೆಲೆ 1200 ರೂ ಆಗಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...