alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ಉಪ ನಾಯಕಿಯನ್ನು ಸತಾಯಿಸುತ್ತಿದ್ಯಾ ರೈಲ್ವೆ ಇಲಾಖೆ?

ಭಾರತ ಮಹಿಳಾ ಕ್ರಿಕೆಟ್ ತಂಡದ ಉಪ ನಾಯಕಿ ಹರ್ಮನ್ ಪ್ರೀತ್ ಕೌರ್ ಸದ್ಯ ವೆಸ್ಟರ್ನ್ ರೈಲ್ವೆ ಇಲಾಖೆಯಯಲ್ಲಿ ಉದ್ಯೋಗ ಹೊಂದಿದ್ದಾರೆ. ಕಳೆದ ವರ್ಷ ಪಂಜಾಬ್ ಪೊಲೀಸ್ ಇಲಾಖೆ ಹರ್ಮನ್ ಪ್ರೀತ್ ಗೆ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆ ನೀಡುವುದಾಗಿ ಆಫರ್ ಕೊಟ್ಟಿತ್ತು.

ಆದ್ರೆ ರೈಲ್ವೆ ಇಲಾಖೆ ಹರ್ಮನ್ ಪ್ರೀತ್ ಗೆ ಉದ್ಯೋಗ ಬದಲಾವಣೆಗೆ ಅವಕಾಶ ನೀಡುತ್ತಿಲ್ಲ. ಸದ್ಯ ಹರ್ಮನ್ ಪ್ರೀತ್ ಗೆ ರೈಲ್ವೆ ಇಲಾಖೆಯಲ್ಲಿ ಆಫೀಸ್ ಸೂಪರಿಂಟೆಂಡೆಂಟ್ ಹುದ್ದೆ ನೀಡಲಾಗಿದೆ. 5 ವರ್ಷದೊಳಗೆ ಅವರನ್ನು ಕರ್ತವ್ಯಮುಕ್ತಗೊಳಿಸಲು ಸಾಧ್ಯವಿಲ್ಲ ಎನ್ನುತ್ತಿದೆ ಇಲಾಖೆ.

ಹಾಗೇನಾದ್ರೂ ಮಾಡಿದಲ್ಲಿ ಅದಕ್ಕೆ ಹರ್ಮನ್ ಪ್ರೀತ್ ಪರಿಹಾರ ಮೊತ್ತ ನೀಡಬೇಕು ಅಂತಾ ಹೇಳ್ತಿದೆ. 5 ವರ್ಷದ ಬಾಂಡ್ ಇರೋದ್ರಿಂದ ಉದ್ಯೋಗ ಬದಲಾವಣೆಯ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂತಾ ಹರ್ಮನ್ ಪ್ರೀತ್ ತಂದೆ ತಿಳಿಸಿದ್ದಾರೆ.

ಪಂಜಾಬ್ ಪೊಲೀಸ್ ಇಲಾಖೆ ಈಗಾಗ್ಲೇ ಹರ್ಮನ್ ಪ್ರೀತ್ ಗೆ ಜಾಯ್ನಿಂಗ್ ಲೆಟರ್ ಕೂಡ ಕೊಟ್ಟಿದೆ. ಆದ್ರೆ ವೆಸ್ಟರ್ನ್ ರೈಲ್ವೆ ಅವರನ್ನು ರಿಲೀವ್ ಮಾಡುತ್ತಿಲ್ಲ. 5 ತಿಂಗಳಿಂದ ವೇತನ ಕೂಡ ನೀಡಿಲ್ಲವಂತೆ. ಆದ್ರೆ ಈಗಾಗ್ಲೇ 3 ವರ್ಷ ಸೇವೆ ಸಲ್ಲಿಸಿರೋ ಹರ್ಮನ್ ಪ್ರೀತ್, ಕಾನೂನಿನ ಪ್ರಕಾರ ಬಾಂಡ್ ಮೊತ್ತ ಭರಿಸಿದ್ರೆ ಅವರನ್ನು ರಿಲೀವ್ ಮಾಡುವುದಾಗಿ ಇಲಾಖೆ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...