alex Certify
ಕನ್ನಡ ದುನಿಯಾ       Mobile App
       

Kannada Duniya

90 ರ ದಶಕದಿಂದಲೂ ತಂಡದಲ್ಲಿದ್ದಾರೆ ಈ ಐವರು ಕ್ರಿಕೆಟಿಗರು

harbazan singh 3445ಜನಪ್ರಿಯ ಕ್ರೀಡೆ ಕ್ರಿಕೆಟ್ 90 ರ ದಶಕದಲ್ಲಿ ಹಲವು ಬದಲಾವಣೆಗಳಿಗೆ ಸಾಕ್ಷಿಯಾಯಿತು. ಏಕ ದಿನ ಪಂದ್ಯಗಳಲ್ಲಿ ಆಟಗಾರರಿಗೆ ಬಣ್ಣದ ಜೆರ್ಸಿಗಳನ್ನು ಧರಿಸಲು ಆ ವೇಳೆ ಅನುಮತಿ ನೀಡಲಾಗಿತ್ತು. ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾರಂತಹ ಪ್ರತಿಭಾವಂತ ಆಟಗಾರರು ಆ ಸಂದರ್ಭದಲ್ಲೇ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟರು.

90 ರ ದಶಕದಲ್ಲಿ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟ ಆನೇಕರು ಇಂದು ನಿವೃತ್ತರಾಗಿದ್ದು, ಆದರೆ ಈ ಐವರು ಆಟಗಾರರು ಮಾತ್ರ ಇಂದಿಗೂ ತಮ್ಮ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರುಗಳ ಪೈಕಿ ಭಾರತದ ಹರ್ಭಜನ್ ಸಿಂಗ್ ಕೂಡಾ ಒಬ್ಬರು.

1998 ರಲ್ಲಿ ಶಾರ್ಜಾದಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ದದ ಪಂದ್ಯದ ಮೂಲಕ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟ ಹರ್ಭಜನ್ ಸಿಂಗ್, ಇಂದಿಗೂ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. 1999 ರಲ್ಲಿ ಶ್ರೀಲಂಕಾ ತಂಡ ಸೇರ್ಪಡೆಗೊಂಡ ತಿಲಕರತ್ನೆ ದಿಲ್ಶಾನ್ ಕೂಡಾ ಈಗಲೂ ತಮ್ಮ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 1996 ರಲ್ಲಿ ಶ್ರೀಲಂಕಾ ವಿರುದ್ದದ ತಮ್ಮ ಮೊದಲ ಪಂದ್ಯದಲ್ಲೇ ಭರ್ಜರಿ ಆಟವಾಡಿ ಗಮನ ಸೆಳೆದಿದ್ದ ಪಾಕಿಸ್ತಾನದ ಶಾಹೀದ್ ಅಫ್ರಿದಿ ಇತ್ತೀಚೆಗೆ ನಿವೃತ್ತಿ ಘೋಷಿಸಿದ್ದರಾದರೂ ಬಳಿಕ ಅದರಿಂದ ಹಿಂದೆ ಸರಿದಿದ್ದಾರೆ. 1999 ರಲ್ಲಿ ವೆಸ್ಟ್ ಇಂಡೀಸ್ ತಂಡ ಸೇರ್ಪಡೆಗೊಂಡಿದ್ದ ಕ್ರಿಸ್ ಗೇಯ್ಲ್ ಇಂದಿಗೂ ತಮ್ಮ ಅಮೋಘ ಆಟದ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ. ಹಾಗೆಯೇ ಶ್ರೀಲಂಕಾದ ರಂಗಾನ ಹೆರಾತ್ ಕೂಡಾ ಈಗಲೂ ತಮ್ಮ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...