alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಲುವಿಗೆ 2 ರನ್ ಗಳಿದ್ದಾಗ 40 ನಿಮಿಷದ ಲಂಚ್ ಬ್ರೇಕ್ ನಿರ್ಧಾರಕ್ಕೆ ತೀವ್ರ ಟೀಕೆ

ಸೌತ್ ಆಫ್ರಿಕಾ ವಿರುದ್ಧ ನಡೆದ 2 ನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ ಜಯಗಳಿಸುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಈ ಮಧ್ಯೆ ಭಾನುವಾರದ ಪಂದ್ಯದ ವೇಳೆ ಅಂಪೈರ್ ಗಳು ಕೈಗೊಂಡ ಲಂಚ್ ಬ್ರೇಕ್ ತೀರ್ಮಾನ ಕ್ರಿಕೆಟ್ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆಯಲ್ಲದೆ ಅಂಪೈರ್ ಗಳ ನಿರ್ಧಾರ ದುರದೃಷ್ಟಕರ ಎಂದು ಹಲವು ಆಟಗಾರರು ಹೇಳಿದ್ದಾರೆ.

ಭಾರತದ ಗೆಲುವಿಗೆ ಕೇವಲ 2 ರನ್ ಬೇಕಾಗಿದ್ದಾಗಲೇ ಅಂಪೈರ್ ಗಳಾದ ಆಲೀಂ ದಾರ್ ಹಾಗೂ ಆ್ಯಡ್ರಿಯಾನ್ ಹೋಲ್ಡ್ ಸ್ಟಾಕ್ 40 ನಿಮಿಷಗಳ ಲಂಚ್ ಬ್ರೇಕ್ ಘೋಷಿಸಿದ್ದು, ಒಂದು ವೇಳೆ ಈ ಸಂದರ್ಭದಲ್ಲಿ ಮಳೆ ಬಂದು ಪಂದ್ಯ ರದ್ದಾಗಿದ್ದರೆ, ಅದಕ್ಕೆ ಯಾರು ಹೊಣೆ ಎಂದು ಕೇಳಲಾಗುತ್ತಿದೆ.

ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಅಂಪೈರ್ ಗಳ ತೀರ್ಮಾನದ ಕುರಿತು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದು, ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿ ಊಟದ ಅವಧಿ ಮುಗಿದ ಮೇಲೆ ಬನ್ನಿ ಎಂದು ಹೇಳಿದಂತಿತ್ತು ಈ ನಿರ್ಧಾರ ಎಂದು ಟ್ವೀಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...