alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದು ಧೋನಿಯನ್ನು ಮಿಸ್ ಮಾಡಿಕೊಳ್ತಾರೆ ಚೆನ್ನೈ ಕ್ರಿಕೆಟ್ ಪ್ರೇಮಿಗಳು

ಭಾರತ-ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟಿ-20 ಪಂದ್ಯ ಇಂದು ಚೆನ್ನೈನಲ್ಲಿ ನಡೆಯಲಿದೆ. ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ಸೋಲಿಸಿ ಕ್ಲೀನ್ ಸ್ವಿಪ್ ಮಾಡುವ ತವಕದಲ್ಲಿ ಟೀಂ ಇಂಡಿಯಾ ಇದೆ. ಚೆನ್ನೈನಲ್ಲಿ ನಡೆಯುತ್ತಿರುವ ಕೊನೆ ಪಂದ್ಯ ಮಾಜಿ ನಾಯಕ ಧೋನಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಚೆನ್ನೈನ ತಲೈವಾ ಎಂದೇ ಗುರುತಿಸಿಕೊಂಡವರು ಮಹೇಂದ್ರ ಸಿಂಗ್ ಧೋನಿ. ಐಪಿಎಲ್ ನಲ್ಲಿ ಚೆನ್ನೈ ತಂಡದ ನೇತೃತ್ವ ವಹಿಸಿರುವ ಧೋನಿಗೆ ಚೆನ್ನೈನಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಇಂದು ಎಂ. ಚಿದಂಬರಂ ಮೈದಾನದಲ್ಲಿ ಟಿ-20 ಪಂದ್ಯ ನಡೆಯುತ್ತಿದೆ. ಇದು ಎರಡನೇ ಅಂತರಾಷ್ಟ್ರೀಯ ಟಿ-20 ಪಂದ್ಯ. ಆರು ವರ್ಷಗಳ ಹಿಂದೆ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಇಲ್ಲಿ ಒಂದು ರನ್ ಗಳ ಸೋಲು ಕಂಡಿತ್ತು.

ಚೆನ್ನೈನಲ್ಲಿ ಧೋನಿ 11 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. 93.25 ಸರಾಸರಿಯಲ್ಲಿ 746 ರನ್ ಗಳಿಸಿದ್ದಾರೆ. ಚೆನ್ನೈನಲ್ಲಿ ಮೂರು ಶತಕ ಕೂಡ ಸಿಡಿಸಿದ್ದಾರೆ. ಚೆನ್ನೈ ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರಿರುವ ಧೋನಿಯನ್ನು ಇಂದು ಅಭಿಮಾನಿಗಳು ಮಿಸ್ ಮಾಡಿಕೊಳ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...