alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಲುವಿನಲ್ಲೂ ದಾಖಲೆ ಬರೆದ ಟೀಮ್ ಇಂಡಿಯಾ

cricket winಜಿಂಬಾಬ್ವೆ ವಿರುದ್ದದ ಮೊದಲ ಟಿ 20 ಪಂದ್ಯದಲ್ಲಿ 2 ರನ್ ಗಳ ಅಂತರದಿಂದ ಸೋಲುವ ಮೂಲಕ ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ, ದ್ವಿತೀಯ ಪಂದ್ಯದಲ್ಲಿ 10 ವಿಕೆಟ್ ಗಳ ಅಂತರದೊಂದಿಗೆ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆ ತಂಡ ಕೇವಲ 99 ರನ್ ಗಳಿಸಲಷ್ಟೇ ಶಕ್ತವಾಗಿ ಟೀಮ್ ಇಂಡಿಯಾಕ್ಕೆ 100 ರನ್ ಗಳ ಗುರಿಯನ್ನು ನೀಡಿತ್ತು. ಇದರ ಬೆನ್ನತ್ತಿದ ಟೀಮ್ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೇ ಕೇವಲ 41 ಎಸೆತಗಳಲ್ಲಿ ನಿಗದಿತ ಗುರಿಯನ್ನು ತಲುಪಿ ಅಮೋಘ ಜಯ ದಾಖಲಿಸಿತು.

ಈ ಹಿಂದೆ ಯುಎಇ ನೀಡಿದ್ದ 82 ರನ್ ಗಳ ಗುರಿಯನ್ನು 59 ಬಾಲ್ ಗಳಿಂದ ಪೂರೈಸಿದ್ದ ಟೀಮ್ ಇಂಡಿಯಾ, ಇಂದಿನ ಪಂದ್ಯದಲ್ಲಿ 99 ರನ್ ಗಳ ಗುರಿಯನ್ನು ಕೇವಲ 41 ಎಸೆತಗಳಲ್ಲಿ ಪೂರೈಸುವ ಮೂಲಕ ದಾಖಲೆ ಬರೆಯಿತು. ಜಿಂಬಾಬ್ವೆ ಮಾಧ್ಯಮಗಳು ಮಾಡಿದ ಯಡವಟ್ಟಿನಿಂದಾಗಿ ಟೀಮ್ ಇಂಡಿಯಾ ಆಟಗಾರರು ಕಳಂಕಿತರನ್ನಾಗುವಂತೆ ಮಾಡಿದ್ದರ ಮಧ್ಯೆ ಅದೆಲ್ಲದಕ್ಕೂ ಉತ್ತರವೆಂಬಂತೆ ತಮ್ಮ ಬ್ಯಾಟಿಂಗ್ ಮೂಲಕ ಟೀಮ್ ಇಂಡಿಯಾ ಆಟಗಾರರು ಉತ್ತರ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...