alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರೀಡಾಪಟುಗಳಿಗೆ ಉಚಿತವಾಗಿ ಸಿಗಲಿದೆ 225,000 ಕಾಂಡೋಮ್

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟ 2018ಕ್ಕೆ ಸಿದ್ಧವಾಗಿದೆ. ಬುಧವಾರ ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನೆಯಾಗಲಿದೆ. ಗೋಲ್ಡ್ ಕೋಸ್ಟ್ ಗೆ ಕ್ರೀಡಾಪಟುಗಳು ಬಂದಿಳಿಯುತ್ತಿದ್ದಾರೆ. ದಿನ ದಿನಕ್ಕೂ ಗೋಲ್ಡ್ ಕೋಸ್ಟ್ ನಲ್ಲಿ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಾಗ್ತಿದೆ.

ಕ್ರೀಡಾಪಟುಗಳಿಗಾಗಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. 225,000 ಕಾಂಡೋಮ್, 17000 ಟಾಯ್ಲೆಟ್ ರೋಲ್ಸ್ ಹಾಗೂ ಉಚಿತ ಐಸ್ ಕ್ರೀಂ ವ್ಯವಸ್ಥೆ ಮಾಡಲಾಗಿದೆ. ಸುಮಾರು 6 ಸಾವಿರ ಆಟಗಾರರು ಹಾಗೂ ಸಿಬ್ಬಂದಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆಟಗಾರರ ಸುರಕ್ಷತೆ ಜೊತೆ ಅವ್ರ ಲೈಂಗಿಕ ಆರೋಗ್ಯದ ಬಗ್ಗೆಯೂ ಸಂಘಟಕರು ಹೆಚ್ಚಿನ ಗಮನ ನೀಡಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಉಚಿತ ಕಾಂಡೋಮ್ ವ್ಯವಸ್ಥೆ ಮಾಡಲಾಗಿದೆ. ಸುಮಾರು 34 ಕಾಂಡೋಮ್ ಪ್ರತಿ ವ್ಯಕ್ತಿಗೆ ಸಿಗಲಿದೆ. 11 ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಪ್ರತಿದಿನ ಆಟಗಾರರಿಗೆ ಮೂರು ಕಾಂಡೋಮ್ ಸಿಗಲಿದೆ. ಇತ್ತೀಚೆಗೆ ದಕ್ಷಿಣ ಕೋರಿಯಾದಲ್ಲಿ ನಡೆದ ಪಯೋಂಗ್ಚಾಂಗ್ ಚಳಿಗಾಲ ಒಲಿಂಪಿಕ್ಸ್ ನಲ್ಲಿ 110,000 ಕಾಂಡೋಮನ್ನು ಉಚಿತವಾಗಿ ಹಂಚಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...