alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮನ್ವೆಲ್ತ್ ಫೆಡರೇಶನ್ ವಿರುದ್ಧ ಸೈನಾ ನೆಹ್ವಾಲ್ ಗರಂ

ಒಲಿಂಪಿಕ್ ಕಂಚಿನ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ತಂದೆ ಹರ್ವೀರ್ ಅವರ ಹೆಸರನ್ನು ಕಾಮನ್ವೆಲ್ತ್ ಗೇಮ್ಸ್ ಗೆ ತೆರಳುತ್ತಿರುವ ಭಾರತೀಯರ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದಾಗಿ ಸೈನಾ ನೆಹ್ವಾಲ್ ತೀವ್ರ ಅಸಮಾಧಾನಗೊಂಡಿದ್ದಾರೆ.

ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಫೋಷಕರು ತಮ್ಮದೇ ಖರ್ಚಿನಲ್ಲಿ ಗೋಲ್ಡ್ ಕೋಸ್ಟ್ ಗೇಮ್ಸ್ ಗೆ ತೆರಳಲು ಅನುಮತಿಸಲಾಗಿದೆ ಅಂತಾ ಕ್ರೀಡಾ ಸಚಿವಾಲಯ ಹೇಳಿತ್ತು. ಆದ್ರೆ ದಿಢೀರನೆ ತಂದೆ ಹೆಸರನ್ನು ಕೈಬಿಟ್ಟಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ಸೈನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಮೊತ್ತ ಭರಿಸಿದ್ದೇನೆ . ಭಾರತೀಯ ಅಧಿಕಾರಿಗಳ ಲಿಸ್ಟ್ ನಲ್ಲಿ ತಂದೆಯ ಹೆಸರು ಸಹ ಇತ್ತು. ಆದ್ರೆ ಕ್ರೀಡಾಗ್ರಾಮಕ್ಕೆ ಬರುವಷ್ಟರಲ್ಲಿ ಅಧಿಕಾರಿಗಳ ಪಟ್ಟಿಯಿಂದ ತಂದೆಯ ಹೆಸರನ್ನೇ ಕೈಬಿಡಲಾಗಿದೆ ಅಂತಾ ಸೈನಾ ಟ್ವೀಟ್ ಕೂಡ ಮಾಡಿದ್ದಾರೆ.

ಎಲ್ಲಾ ಪಂದ್ಯಾವಳಿಗಳಿಗೂ ಸೈನಾ ತಮ್ಮ ತಂದೆಯನ್ನು ಕರೆದೊಯ್ಯುತ್ತಾರಂತೆ. ಕಾಮನ್ವೆಲ್ತ್ ಗೇಮ್ ನಲ್ಲೂ ತನಗೆ ತಂದೆಯ ಬೆಂಬಲ ಬೇಕು, ಆದ್ರೆ ಕ್ರೀಡಾಗ್ರಾಮ ಪ್ರವೇಶಿಸಲು ಅವರಿಗೆ ಅನುಮತಿಯೇ ಇಲ್ಲ ಅಂತಾ ಟ್ವೀಟ್ ಮಾಡಿರೋ ಸೈನಾ, ಅದನ್ನು ಕಾಮನ್ವೆಲ್ತ್ ಫೆಡರೇಶನ್ ಗೆ ಟ್ಯಾಗ್ ಮಾಡಿದ್ದಾರೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...