alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮನ್ವೆಲ್ತ್ ನಲ್ಲಿ ಚಿನ್ನ ಗೆದ್ದಿರೋ ವೇಯ್ಟ್ ಲಿಫ್ಟರ್ ಮೇಲೆ ಹಲ್ಲೆ

ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ 2018ರ ಚಿನ್ನದ ಪದಕ ವಿಜೇತ ವೇಯ್ಟ್ ಲಿಫ್ಟರ್ ಪೂನಂ ಯಾದವ್ ಮೇಲೆ ಹಲ್ಲೆ ನಡೆದಿದೆ. ರೊಹಾನಿಯಾ ಎಂಬಲ್ಲಿ ಈ ಘಟನೆ ನಡೆದಿದೆ.

ಪೂನಂ ಸಂಬಂಧಿಕರು ಹಾಗೂ ನೆರೆಹೊರೆಯವರು ಕಿತ್ತಾಡಿಕೊಳ್ಳುತ್ತಿದ್ರು. ಅದನ್ನು ತಪ್ಪಿಸಲು ಹೋದ ಪೂನಂ ಮೇಲೆ ಹಲ್ಲೆ ಮಾಡಿದ್ದಾರೆ. ಏಪ್ರಿಲ್ 13ರಂದು ತವರು ಗ್ರಾಮ ದಾಂಡುಪುರಕ್ಕೆ ಬಂದಿದ್ದ ಪೂನಂ, ತನ್ನ ಚಿಕ್ಕಪ್ಪ ಕೈಲಾಶ್ ಯಾದವ್ ರನ್ನು ಭೇಟಿ ಮಾಡಲು ಏಪ್ರಿಲ್ 14ರಂದು ಮುಂಗ್ವಾರ್ ಗ್ರಾಮಕ್ಕೆ ಭೇಟಿ ನೀಡಿದ್ದರು.

ಆ ಸಮಯದಲ್ಲಿ ಹಳೆಯ ಭೂವಿವಾದಕ್ಕೆ ಸಂಬಂಧಪಟ್ಟಂತೆ ಕೈಲಾಶ್ ಯಾದವ್ ಮತ್ತವರ ಪಕ್ಕದ ಮನೆಯವರ ಮಧ್ಯೆ ಜಟಾಪಟಿ ನಡೆಯುತ್ತಿತ್ತು. ಕೈಲಾಶ್, ಎದುರಾಳಿಗಳ ಮೇಲೆ ಹಲ್ಲೆ ಮಾಡಲು ಪೂನಂ ಮತ್ತವರ ಕುಟುಂಬಸ್ಥರನ್ನು ಕರೆಸಿದ್ದಾನೆ ಎಂಬ ಸುದ್ದಿ ಹರಡಿತ್ತು.

ಇದನ್ನು ನಂಬಿದ ನೆರೆಮನೆಯವರು ಪೂನಂ ಮತ್ತು ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ. ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಪೂನಂ ಯಾದವ್ ಗೂ ಗಾಯವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...