alex Certify
ಕನ್ನಡ ದುನಿಯಾ       Mobile App
       

Kannada Duniya

ಪುತ್ರಿಯ ಸ್ವರ್ಣ ವಿಜೇತ ಪಂದ್ಯ ನೋಡುವ ಅವಕಾಶ ತಂದೆಗೇ ಸಿಗಲಿಲ್ಲ

ದಂಗಲ್ ಚಿತ್ರದಲ್ಲಾದಂತೆ ಈ ಬಾರಿ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರೋ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬಬಿತಾ ಫೋಗಟ್ ಸ್ವರ್ಣ ಗೆದ್ದಿರುವ ಪಂದ್ಯವನ್ನು ನೋಡಲು ತಂದೆ ಮಹಾವೀರ್ ಫೋಗಟ್ ಗೆ ಸಾಧ್ಯವಾಗಿಲ್ಲ.

ನಿಯಮದ ಪ್ರಕಾರ ಬಬಿತಾಗೆ ಆಯೋಜಕರು 2 ಟಿಕೆಟ್ ಕೊಡಬೇಕು. ಆದ್ರೆ ಅದೆಷ್ಟು ಹೊತ್ತು ಕ್ಯೂನಲ್ಲಿ ನಿಂತ್ರೂ ಮಹಾವೀರ್ ಫೋಗಟ್ ಗೆ ಟಿಕೆಟ್ ಸಿಗಲೇ ಇಲ್ಲ. ಕೊನೆಗೆ ಆಸ್ಟ್ರೇಲಿಯಾ ತಂಡದವರು ಫೋಗಟ್ ಗೆ ಟಿಕೆಟ್ ಕೊಟ್ಟು ಸಹಕರಿಸಿದ್ರು.

ಆದ್ರೆ ಅಷ್ಟರಲ್ಲಾಗ್ಲೇ 53 ಕೆಜಿ ವಿಭಾಗದ ಫೈನಲ್ ಪಂದ್ಯ ಮುಕ್ತಾಯವಾಗಿತ್ತು. ಮಗಳು ಚಿನ್ನದ ಪದಕ ಗೆದ್ದ ಪಂದ್ಯವನ್ನು ನೋಡುವ ಅವಕಾಶ ಮಹಾವೀರ್ ಫೋಗಟ್ ಗೆ ಸಿಗಲೇ ಇಲ್ಲ. ಈ ಬಗ್ಗೆ ಬಬಿತಾ ಕೂಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಂದೆಗೆ ಟಿಕೆಟ್ ಕೊಡುವಂತೆ ಕಾಮನ್ವೆಲ್ತ್ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಸ್ಪಂದಿಸಿಲ್ಲ ಅಂತಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...