alex Certify
ಕನ್ನಡ ದುನಿಯಾ       Mobile App
       

Kannada Duniya

IPL ಬಿಡ್ಡಿಂಗ್ನಲ್ಲಿ ಅಫ್ಘಾನ್ ಆಟಗಾರರಿಗೂ ಡಿಮ್ಯಾಂಡ್

rashid-khan-afghanistan759

ಈ ಬಾರಿಯ ಐಪಿಎಲ್ ಬಿಡ್ಡಿಂಗ್ ನಲ್ಲಿ ಹಲವು ಅಚ್ಚರಿಯ ಬಿಕರಿಗಳು ನಡೆದಿವೆ. ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ 14.5 ಕೋಟಿಗೆ ಮಾರಾಟವಾದ್ರೆ, ವೇಗಿ ಟೈಮಲ್ ಮಿಲ್ಸ್ 12 ಕೋಟಿ ರೂಪಾಯಿಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪಾಲಾಗಿದ್ದಾರೆ.

ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು 4 ಕೋಟಿ ರೂಪಾಯಿಗೆ ಖರೀದಿಸುವ ಮೂಲಕ ಸನ್ ರೈಸರ್ಸ್ ಹೈದ್ರಾಬಾದ್ ಅಚ್ಚರಿ ಮೂಡಿಸಿದೆ. ಅಫ್ಘಾನ್ ನ ಆಲ್ ರೌಂಡರ್ ಮೊಹಮ್ಮದ್ ನಬಿ ಕೂಡ ಸನ್ ರೈಸರ್ಸ್ ಪಾಲಾಗಿದ್ದಾರೆ. ತಮಿಳುನಾಡಿನ ಎಡಗೈ ವೇಗಿ ಟಿ.ನಟರಾಜನ್ ಅವರನ್ನು 3 ಕೋಟಿ ರೂಪಾಯಿಗೆ ಕಿಂಗ್ ಇಲವೆನ್ ಪಂಜಾಬ್ ತಂಡ ಖರೀದಿಸಿದೆ. ಮೂಲ ಬೆಲೆ 10 ಲಕ್ಷಕ್ಕಿಂತ ಗಿಂತ 30 ಪಟ್ಟು ಹೆಚ್ಚಿನ ಮೊತ್ತಕ್ಕೆ ಅವರು ಬಿಕರಿಯಾಗಿದ್ದಾರೆ.

ರಾಜಸ್ತಾನದ ವೇಗದ ಬೌಲರ್ ಅಂಕಿತ್ ಚೌಧರಿ ಅವರನ್ನು 2 ಕೋಟಿ ರೂಪಾಯಿ ಕೊಟ್ಟು ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿಗಳು ಖರೀದಿ ಮಾಡಿದ್ದಾರೆ. ಕರ್ನಾಟಕದ ಯುವ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರು 2 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇಲ್ ಆಗಿದ್ದಾರೆ. ವರುಣ್ ಅರೋನ್ 2.8 ಕೋಟಿಗೆ ಹಾಗೂ ಕರ್ಣ ಶರ್ಮಾ 3.2 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ಆದ್ರೆ ಹಿರಿಯ ಆಟಗಾರರಾದ ಚೇತೇಶ್ವರ ಪೂಜಾರಾ ಮತ್ತು ಇಶಾಂತ್ ಶರ್ಮಾರನ್ನು ಯಾವ ತಂಡವೂ ಖರೀದಿ ಮಾಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...