alex Certify
ಕನ್ನಡ ದುನಿಯಾ       Mobile App
       

Kannada Duniya

2011 ರ ವಿಶ್ವಕಪ್ ನಲ್ಲಿ ಭಾರತೀಯ ಆಟಗಾರನಿಂದ ಮ್ಯಾಚ್ ಫಿಕ್ಸಿಂಗ್?

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ 2011 ರಲ್ಲಿ ಟೀಂ ಇಂಡಿಯಾ ಎರಡನೇ ಬಾರಿ ವಿಶ್ವಕಪ್ ಗೆದ್ದು ಬೀಗಿತ್ತು. ಕೊನೆ ಓವರ್ ನಲ್ಲಿ ಶ್ರೀಲಂಕಾ ವಿರುದ್ಧ ಧೋನಿ ಆಡಿದ ಆಟವನ್ನು ಈಗ್ಲೂ ನೋಡಿ ಅಭಿಮಾನಿಗಳು ಖುಷಿ ಪಡ್ತಾರೆ. ಆದ್ರೆ ಇದೇ ವಿಶ್ವಕಪ್ ನ ಭಾರತ ತಂಡದ ಸದಸ್ಯನೊಬ್ಬನ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ.

2011 ರಲ್ಲಿ ಜೈಪುರದಲ್ಲಿ ನಡೆದ ರಜಪೂತ್ ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ ಆಟಗಾರನ ವರ್ತನೆ ವಿಚಿತ್ರವಾಗಿತ್ತು. ಬಿಸಿಸಿಐ ಭ್ರಷ್ಟಾಚಾರ ವಿರೋಧಿ ಘಟಕ ಹಾಗೂ ರಾಜಸ್ತಾನ ಪೊಲೀಸರು ಈ ಬಗ್ಗೆ ವಿಚಾರಣೆ ಶುರು ಮಾಡಿದ್ದರು. ಕಳೆದ ವರ್ಷ ನಾಲ್ಕು ಹೊಟೇಲ್ ಮೇಲೆ ದಾಳಿ ನಡೆಸಿ 14 ಜನರನ್ನು ಬಂಧಿಸಿದ್ದರು. ಬಂಧಿತರಲ್ಲಿ ಆಟಗಾರ ಕೂಡ ಇದ್ದ. ಆತನಿಂದ ನಗದು, ಮೊಬೈಲ್, ವಾಕಿಟಾಕಿ, ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿತ್ತು.

ವಿಚಾರಣೆ ನಂತ್ರ ಆಟಗಾರನನ್ನು ಬಿಡುಗಡೆ ಮಾಡಲಾಗಿತ್ತು. 2017 ರಲ್ಲಿ ಈ ಪ್ರಕರಣದ ವಿಚಾರಣೆ ಹೊಣೆಯನ್ನು ಸಿಐಡಿಗೆ ನೀಡಲಾಗಿದೆ. ಸಿಐಡಿ ಸಣ್ಣ ಸಣ್ಣ ವಿಷ್ಯಗಳನ್ನು ಗಂಭೀರವಾಗಿ ತೆಗೆದುಕೊಂಡು ವಿಚಾರಣೆ ನಡೆಸ್ತಿದೆ. ರಜಪೂತ್ ಪ್ರೀಮಿಯರ್ ಲೀಗ್ ನಲ್ಲಿ ಎಲ್ಲವೂ ಮೊದಲೇ ನಿರ್ಧರಿತವಾಗುತ್ತದೆ. ಇದ್ರ ಹಿಂದೆ ಭಾರತದ ಆಟಗಾರನೊಬ್ಬನ ಕೈವಾಡವಿದೆ ಎಂಬುದು ಬಹಿರಂಗವಾಗಿದೆ. ಹಾಗೆ 2011ರಲ್ಲಿ ನಡೆದ ವಿಶ್ವಕಪ್ ನಲ್ಲಿಯೂ ಆತ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದ ಎಂಬ ಸುಳಿವು ಸಿಗ್ತಿದೆ. ಈ ಬಗ್ಗೆ ವಿಚಾರಣೆ ಮುಂದುವರೆದಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...