alex Certify
ಕನ್ನಡ ದುನಿಯಾ       Mobile App
       

Kannada Duniya

20-20: ಸ್ಥಾನ ಕಳೆದುಕೊಂಡ ಅನುಭವಿ ಆಟಗಾರರು

dhoni

ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಎರಡು ಟಿ -20 ಪಂದ್ಯಗಳಿಗೆ ಬಿಸಿಸಿಐ ಇಂಡಿಯಾ ಟೀಂ ಘೋಷಣೆ ಮಾಡಿದೆ. ಅಮೆರಿಕಾದಲ್ಲಿ ಆಗಸ್ಟ್ 27 ಹಾಗೂ 28ರಂದು ಎರಡು ಪಂದ್ಯಗಳು ನಡೆಯಲಿದೆ. ಅಮೆರಿಕಾದ ಸೆಂಟ್ರಲ್ ಬೋರ್ಡ್ ರೀಜನಲ್ ಪಾರ್ಕ್ ಹಾಗೂ ಫೋರ್ಟ್ ಲಾಡರ್ ಡೇಲ್ ನಲ್ಲಿ ಪಂದ್ಯವನ್ನು ಆಯೋಜಿಸಲಾಗಿದೆ.

ವರದಿಗಳ ಪ್ರಕಾರ 20-20 ಪಂದ್ಯವನ್ನಾಡುವ ಕೆಲ ಅನುಭವಿ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ವೆಸ್ಟ್ ಇಂಡೀಸ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಅಮಿತ್ ಮಿಶ್ರಾ 20-20 ತಂಡಕ್ಕೆ ವಾಪಸ್ಸಾಗಿದ್ದಾರೆ. ಯುವರಾಜ್, ಸುರೇಶ್ ರೈನಾ, ಹರ್ಭಜನ್ ಸಿಂಗ್, ಪವನ್ ನೇಗಿ, ಆಶಿಶ್ ನೆಹ್ರಾ, ಪಾಂಡ್ಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಅಮಿತ್ ಮಿಶ್ರಾ, ಭುವನೇಶ್ವರ ಕುಮಾರ್ ಮತ್ತು ಸ್ಟುವರ್ಟ್ ಬಿನ್ನಿ ತಂಡಕ್ಕೆ ಮರಳಿದ್ದಾರೆ. ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಲೋಕೇಶ್ ರಾಹುಲ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಜೆಸ್ಪ್ರಿತ್ ಸಿಂಗ್ ಬೂಮ್ರ ,ಮೊಹಮ್ಮದ್ ಶಮಿ, ಭುವನೇಶ್ವರ ಕುಮಾರ್, ಉಮೇಶ್ ಯಾದವ್, ಅಮಿತ್ ಮಿಶ್ರಾ, ಸ್ಟುವರ್ಟ್ ಬಿನ್ನಿ ಟ್ವೆಂಟಿ ಟ್ವೆಂಟಿ ಟೀಂನಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...