alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ರೈಡ್ ನಲ್ಲಿ ವಿಶ್ವದಾಖಲೆ ಬರೆದ 19 ರ ಪೋರಿ…!

ಹೆಣ್ಣು ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಸಾಧಿಸಬಲ್ಲಳು ಎಂಬುದಕ್ಕೆ 19 ವರ್ಷದ ಈ ಯುವತಿ ರಿಯಾ ಸಾಕ್ಷಿ. ಲಡಾಖ್ ನಲ್ಲಿರುವ ಖರ್ದಾಂಗ್-ಲಾ ಎಂಬ ವಿಶ್ವದ ಅತಿ ಎತ್ತರದ ಶಿಖರವನ್ನ ತನ್ನ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಏರಿ ವಿಶ್ವ ದಾಖಲೆ ಮಾಡಿದ್ದಾಳೆ. ಆಕೆಯ ತಂದೆ ಉಡುಗೊರೆಯಾಗಿ ನೀಡಿದ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಮೋಟಾರ್ ಬೈಕ್ ನಲ್ಲಿ 18,379 ಅಡಿ ಎತ್ತರದ ಸ್ಥಳವನ್ನು ತಲುಪಿ ದಾಖಲೆ ಬರೆದಿದ್ದಾಳೆ ರಿಯಾ.

ದೆಹಲಿಯ ಇಂದ್ರಪ್ರಸ್ಥ ಕಾಲೇಜಿನಲ್ಲಿ ಪದವಿ ಓದುತ್ತಿರುವ ರಿಯಾ, ಮೋಟಾರ್ ಬೈಕ್ ಓಡಿಸುವುದು ಕಲಿತಿರಲಿಲ್ಲ. ಆದ್ರೆ ಬೈಕ್ ಗಳ ಬಗ್ಗೆ ಆಕೆಗೆ ಕ್ರೇಜ್ ಇತ್ತು. ಹೀಗಾಗಿ ಅವರ ತಂದೆ ಆಕೆಗೆ ರಾಯಲ್ ಎನ್ ಫೀಲ್ಡ್ ಬೈಕ್ ನ್ನ ಉಡುಗೊರೆಯಾಗಿ ನೀಡಿದ್ರು. ತನ್ನ ಸಹೋದರನ ಸಹಾಯದಿಂದ ಬೈಕ್ ಓಡಿಸುವುದನ್ನ ಕಲಿತ ರಿಯಾ ನಂತರ ಬೈಕ್ ನಲ್ಲಿ ಸಣ್ಣ ಪುಟ್ಟ ಟ್ರಿಪ್ ಹೋಗಿ ಬಂದಿದ್ಲು.

ಫೇಸ್ ಬುಕ್ ನಲ್ಲಿ ಈ ಪ್ರವಾಸದ ಬಗ್ಗೆ ತಿಳಿದುಕೊಂಡಿದ್ದ ರಿಯಾ, ಈ ಹಿಂದೆ ಸ್ಕೂಟಿಯಲ್ಲಿ 20 ವರ್ಷದ ಅನಾಮ್ ಹಶಿಮ್ಗೆ, ಖರ್ದಾಂಗ್ -ಲಾ ತಲುಪಿದ್ದು ತಿಳಿಯಿತು. ಹೀಗಾಗಿ ಈ ಪ್ರವಾಸದ ಬಗ್ಗೆ ತುಂಬಾ ಉತ್ಸುಕಳಾಗಿದ್ದ ರಿಯಾ ತನ್ನ ಪೋಷಕರಿಗೂ ಈ ಬಗ್ಗೆ ತಿಳಿಸಿದ್ರು. ಅವರು ಕೂಡಾ ಬೈಕ್ ನಲ್ಲಿ ಮಗಳ ಪ್ರವಾಸಕ್ಕೆ ಒಪ್ಪಿಕೊಂಡ್ರು. ಅಂತೆಯೇ ಕಳೆದ ವರ್ಷ ಜೂನ್ 17ಕ್ಕೆ ಹೊರಟ ರಿಯಾ ಸವಾರಿ ಜುಲೈ 1ಕ್ಕೆ ವಾಪಸ್ಸಾಯ್ತು. ಆ 13 ದಿನಗಳು ನನ್ನ ಜೀವನದಲ್ಲಿ ಮರೆಯಲಾಗದ ಅನುಭವ ಅಂತಾ ರಿಯಾ ನೆನಪಿನ ಬುತ್ತಿ ಬಿಚ್ಚಿಡ್ತಾರೆ.

ರಿಯಾ ಈ ಹಿಂದೆ ಎಲ್ಲಿಗೂ ಒಬ್ಬಳೆ ಹೋದವಳಲ್ಲ. 9ನೇ ತರಗತಿಯಲ್ಲಿದ್ದಾಗ ಎನ್ ಸಿ ಸಿ ಕ್ಯಾಂಪ್ ಗೆ ಹೋಗಿದ್ದು ಬಿಟ್ಟರೆ ಮತ್ತೆಲ್ಲೂ ಪೋಷಕರಿಲ್ಲದೆ ಹೋಗಿಲ್ಲ. ಆದ್ರೆ ಈ ಬಾರಿ ಮೋಟಾರ್ ಬೈಕ್ ರೈಡ್ ನಲ್ಲಿ ಒಬ್ಬಳೇ ಹೋಗುತ್ತಿರುವುದು ಆಕೆಗೆ ಕೊಂಚ ಹೆದರಿಕೆ ಇತ್ತು. ಆದ್ರೆ ಅದನ್ನು ಲೆಕ್ಕಿಸದೆ ರಿಯಾ ತನ್ನ ಸವಾರಿ ಮುಂದುವರೆಸಿದಳು. ಮನಾಲಿ ತಲುಪುತ್ತಿದ್ದಂತೆ ಮೊಬೈಲ್ ನೆಟ್ ವರ್ಕ್ ಕೂಡಾ ಹೋಯ್ತು, ಇದ್ರಿಂದಾಗಿ ಪೋಷಕರೊಂದಿಗೆ ಸಂಪರ್ಕವೂ ಸಾಧ್ಯವಾಗಲಿಲ್ಲ. ಹೀಗಿದ್ದಾಗ ಆಕೆಗೆ ಮನೆಗೆ ಹಿಂದಿರುಗಲೇ ಅನ್ನಿಸಿದ್ದು ಹೌದು. ಆದ್ರೆ ಛಲ ಬಿಡದ ರಿಯಾ ಕೊನೆಗೂ ಖರ್ದಾಂಗ್ ಲಾ ತಲುಪಿದಳು.

ರಿಯಾ ಯಶಸ್ವಿಯಾಗಿ ತನ್ನ ಪ್ರವಾಸದಿಂದ ಹಿಂದಿರುಗಿದ್ದಾಳೆ. ಕಾಲೇಜಿನಲ್ಲಿ ಸಹಪಾಠಿಗಳು, ಶಿಕ್ಷಕರು ಆಕೆಯನ್ನು ಹುರಿದುಂಬಿಸುತ್ತಿದ್ದಾರೆ. ಮುಂದಿನ ವರ್ಷ ಹಿಮಾಲಯದಲ್ಲಿ ಬೈಕ್ ರೈಡ್ ಮಾಡಲು ರಿಯಾ ರೆಡಿಯಾಗ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...