alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಕಮಾಲ್ ಮಾಡಿದ ಸಾವಿರ ರನ್ ಗಳ ‘ಸರದಾರ’

ಕ್ರಿಕೆಟ್ ಅಭಿಮಾನಿಗಳು ಮುಂಬೈನ 17 ರ ಬಾಲಕ ಪ್ರಣವ್ ಧನ್ವಾಡೆಯನ್ನು ಮರೆಯಲು ಸಾಧ್ಯವೇ ಇಲ್ಲ. ಬಡ ಕುಟುಂಬದ ಬಾಲಕ 323 ಎಸೆತಗಳಲ್ಲಿ ಬರೋಬ್ಬರಿ 1009 ರನ್ ಗಳಿಸಿ ದಾಖಲೆ ಬರೆದಿದ್ದ. ಈಗ ಮತ್ತೆ ಸುದ್ದಿಗೆ ಬಂದಿದ್ದಾನೆ ಪ್ರಣವ್.

ಕಾಲೇಜು ಮಟ್ಟದಲ್ಲಿ ನಡೆದ ಪಂದ್ಯದಲ್ಲಿ ಅದ್ಭುತ ದ್ವಿಶತಕ ಬಾರಿಸಿದ್ದಾನೆ. ಜುಂಜುನ್ವಾಲಾ ಕಾಲೇಜ್-ಗುರು ನಾನಕ್ ಕಾಲೇಜಿನ ನಡುವೆ ನಡೆದ ಪಂದ್ಯದಲ್ಲಿ ಜುಂಜುನ್ವಾಲಾ ಕಾಲೇಜ್ ಪರ ಮೈದಾನಕ್ಕಿಳಿದ ಪ್ರಣವ್ 236 ರನ್ ಗಳಿಸಿದ್ದಾನೆ.

35 ಫೋರ್ ಹಾಗೂ ಮೂರು ಸಿಕ್ಸ್ ಬಾರಿಸಿ 236 ರನ್ ಗಳಿಸಿದ ಪ್ರಣವ್ ಮತ್ತೆ ಎಲ್ಲರ ಮನೆ ಮಾತಾಗಿದ್ದಾನೆ. ಪ್ರಣವ್ ಹಿಂದಿನ ಸಾಧನೆ ಗಮನದಲ್ಲಿಟ್ಟುಕೊಂಡು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಪ್ರತಿ ತಿಂಗಳು 10 ಸಾವಿರ ರೂಪಾಯಿ ಸ್ಕಾಲರ್ ಶಿಪ್ ನೀಡ್ತಿದೆ. ಕೆಲ ದಿನಗಳಿಂದ ಬ್ಯಾಟ್ ಪ್ರಣವ್ ಕೈ ಹಿಡಿದಿರಲಿಲ್ಲ. ಆದ್ರೆ ಗುರುನಾನಕ್ ಕಾಲೇಜ್ ವಿರುದ್ಧ ಪ್ರಣವ್ ಮಿಂಚಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...