alex Certify
ಕನ್ನಡ ದುನಿಯಾ       Mobile App
       

Kannada Duniya

4 ಓವರ್ ನಲ್ಲಿ ಒಂದೂ ರನ್ ನೀಡದೇ 10 ವಿಕೆಟ್ ಗಳಿಕೆ

ಜೈಪುರ: ಟಿ -20 ಕ್ರಿಕೆಟ್ ನ ಇನಿಂಗ್ಸ್ ಒಂದರಲ್ಲಿ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ರಾಜಸ್ತಾನದ ಹುಡುಗನೊಬ್ಬ ಇತಿಹಾಸ ನಿರ್ಮಿಸಿದ್ದಾನೆ.

15 ವರ್ಷದ ವೇಗದ ಬೌಲರ್ ಆಕಾಶ್ ಚೌಧರಿ 4 ಓವರ್ ಬೌಲಿಂಗ್ ಮಾಡಿದ್ದು, ಒಂದೂ ರನ್ ನೀಡದೇ 10 ವಿಕೆಟ್ ಗಳಿಸಿದ್ದಾರೆ. ಜೈಪುರದಲ್ಲಿ ನಡೆದ ಭಾವೆರ್ ಸಿಂಗ್ ಟಿ -20 ಟೂರ್ನಿಯ ಪಂದ್ಯದಲ್ಲಿ ಎಡಗೈ ಮಧ್ಯಮ ವೇಗಿಯಾಗಿರುವ ಆಕಾಶ್ ಚೌಧರಿ ಈ ಸಾಧನೆ ಮಾಡಿದ್ದಾರೆ.

ದಿಶಾ ಕ್ರಿಕೆಟ್ ಅಕಾಡೆಮಿ ಮತ್ತು ಪರ್ಲ್ ಅಕಾಡೆಮಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ದಿಶಾ ಕ್ರಿಕೆಟ್ ಅಕಾಡೆಮಿಯ ಪರವಾಗಿ ಕಣಕ್ಕಿಳಿದಿದ್ದ ಆಕಾಶ್ ಚೌಧರಿ 6 ಮಂದಿಯನ್ನು ಕ್ಲೀನ್ ಬೌಲ್ಡ್ ಮಾಡಿದ್ದಾರೆ. 4 ಮಂದಿ ಆಟಗಾರರನ್ನು ಎಲ್.ಬಿ.ಡಬ್ಲ್ಯೂ. ಬಲೆಗೆ ಕೆಡವಿದ್ದಾರೆ. ಆಕಾಶ್ ದಾಳಿಯಿಂದಾಗಿ ಪರ್ಲ್ ತಂಡ 32 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲು ಕಂಡಿದೆ.

ಇದಕ್ಕೂ ಮೊದಲಿಗೆ ಬ್ಯಾಟಿಂಗ್ ಮಾಡಿದ ದಿಶಾ ತಂಡ 20 ಓವರ್ ಗಳಲ್ಲಿ 156 ರನ್ ಗಳಿಸಿತು. ತಮ್ಮ ಸಾಧನೆಯ ಕುರಿತಾಗಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ನ ಇನಿಂಗ್ಸ್ ಒಂದರಲ್ಲಿ ಇಂಗ್ಲೆಂಡ್ ಆಟಗಾರ ಜಿಮ್ ಲೇಕರ್ ಹಾಗೂ ಭಾರತದ ಅನಿಲ್ ಕುಂಬ್ಳೆ 10 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...