alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಕ್ಸಿಂಗ್ ಪಂದ್ಯದಲ್ಲೇ ಬಂದೆರಗಿತ್ತು ಸಾವು

tn-g

ಚೆನ್ನೈ: ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ, 14 ವರ್ಷದ ಬಾಲಕಿ ದಾರುಣವಾಗಿ ಸಾವು ಕಂಡ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ.

9 ನೇ ತರಗತಿ ಓದುತ್ತಿದ್ದ  ಕೆ. ಮಾರೀಶ್ವರಿ ಮೃತಪಟ್ಟ ಬಾಲಕಿ. 46 ಕೆ.ಜಿ. ವಿಭಾಗದ ಜಿಲ್ಲಾ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಮಾರೀಶ್ವರಿಗೆ ಗಂಭೀರ ಪೆಟ್ಟಾಗಿದೆ.

ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಮಗಳ ಪಂದ್ಯವನ್ನು ನೋಡಲು ಆಕೆಯ ತಾಯಿ ಕೂಡ ಆಗಮಿಸಿದ್ದರು.

ಪ್ರಕರಣದ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶ್ವಿನ್ ಕೊಟ್ನೀಸ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...