alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಥಾಲಿ ರಾಜ್ ಬಗ್ಗೆ ನಿಮಗೆಷ್ಟು ಗೊತ್ತು…?

ಮಿಥಾಲಿ ರಾಜ್ ಭಾರತದ ಮಹಿಳಾ ಕ್ರಿಕೆಟ್ ತಂಡದ ಸಾರಥಿ. ಮೈದಾನಕ್ಕಿಳಿದ್ರೆ ಅಕ್ಷರಶಃ ಗೆಲುವಿಗಾಗಿ ಹೋರಾಟ ನಡೆಸ್ತಾರೆ. ಕೇವಲ ನಾಯಕತ್ವ ಮಾತ್ರವಲ್ಲ, ಅದ್ಭುತ ಬ್ಯಾಟಿಂಗ್ ಮೂಲಕ ಮಹಿಳಾ ಕ್ರಿಕೆಟ್ ನಲ್ಲಿ ಹತ್ತಾರು ದಾಖಲೆಗಳನ್ನು ಮಾಡಿದ್ದಾರೆ. ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನೋಡೋಣ

ಮಿಥಾಲಿ ರಾಜ್ ಒಬ್ಬ ಪುಸ್ತಕ ಪ್ರಿಯೆ. ಹವ್ಯಾಸಿ ಓದುಗರು. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಗೆ ಹೋಗುವ ಮುನ್ನ ಜಲಾಲುದ್ದೀನ್ ರೂಮಿ ಬಗೆಗಿನ ಪುಸ್ತಕ ಓದುತ್ತಿದ್ದರಂತೆ.

ಮಿಥಾಲಿಗೆ ಅರ್ಜುನ ಪ್ರಶಸ್ತಿ ಸಂದಿದೆ. 2013ರಲ್ಲಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಕೇವಲ ಅರ್ಜುನ ಪ್ರಶಸ್ತಿ ಮಾತ್ರವಲ್ಲ, 2015ರಲ್ಲಿ ಮಿಥಾಲಿ ರಾಜ್ ಪದ್ಮಶ್ರೀ ಪುರಸ್ಕೃತರಾಗಿದ್ದಾರೆ.

ಮಿಥಾಲಿ ರಾಜ್ ಅವರ ತಂದೆ ಭಾರತೀಯ ವಾಯುಸೇನೆಯಲ್ಲಿ ಅಧಿಕಾರಿಯಾಗಿದ್ದರು.

ಕ್ರಿಕೆಟ್ ಲೋಕಕ್ಕೆ ಕಾಲಿಡುವ ಮುನ್ನ ಮಿಥಾಲಿ ಶಾಸ್ತ್ರೀಯ ನೃತ್ಯಗಾರ್ತಿಯಾಗಿದ್ದರು. ಭರತನಾಟ್ಯಂ ಕಲಿತಿದ್ದ ಮಿಥಾಲಿ, ಅದೇ ಕ್ಷೇತ್ರದಲ್ಲಿ ಮುಂದುವರಿಯಲು ಇಚ್ಛಿಸಿದ್ದರು.

ಏಕದಿನ ಕ್ರಿಕೆಟ್ ನಲ್ಲಿ 5000 ರನ್ ಗಡಿ ದಾಟಿದ ವಿಶ್ವದ ಎರಡನೇ ಆಟಗಾರ್ತಿ ಮಿಥಾಲಿ ರಾಜ್.

ಕ್ರಿಕೆಟ್ ಗೆ ಪದಾರ್ಪಣೆ ಮಾಡಿದಾಗ ಮಿಥಾಲಿಗೆ ಕೇವಲ 16ರ ಹರೆಯ. ಆಡಿದ ಮೊದಲ ಏಕದಿನ ಪಂದ್ಯದಲ್ಲೇ ಸೆಂಚುರಿ ಬಾರಿಸಿದ ಅತಿ ಕಿರಿಯ ಆಟಗಾರ್ತಿ ಮಿಥಾಲಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...