alex Certify
ಕನ್ನಡ ದುನಿಯಾ       Mobile App
       

Kannada Duniya

ಹರೆಯದವರನ್ನೂ ನಾಚಿಸುವಂತೆ ಓಡ್ತಾರೆ 101 ವರ್ಷದ ಅಜ್ಜಿ

ಚಂಡೀಗಢದ ಈ ಅಜ್ಜಿಗೆ 101 ವರ್ಷ. ಇಂತಹ ಇಳಿವಯಸ್ಸಿನಲ್ಲೂ ರನ್ನಿಂಗ್ ರೇಸ್ ನಲ್ಲಿ ಸ್ಪರ್ಧಿಸಿ ಪ್ರಶಸ್ತಿ ಗೆದ್ದ ಸಾಹಸಿ ಈಕೆ. ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ನಡೆದ ‘ವರ್ಲ್ಡ್ ಮಾಸ್ಟರ್ಸ್ ಗೇಮ್’ ನಲ್ಲಿ 100 ಮೀಟರ್ ರನ್ನಿಂಗ್ ರೇಸ್ ನಲ್ಲಿ ಮನ್ ಕೌರ್ ಪ್ರಶಸ್ತಿ ಗೆದ್ದಿದ್ದಾರೆ.

ಸದ್ಯ ಹೆಚ್ಚಿನ ತರಬೇತಿಗಾಗಿ ಮನ್ ಕೌರ್ ಚಂಡೀಗಢದಿಂದ ಪಟಿಯಾಲಕ್ಕೆ ಶಿಫ್ಟ್ ಆಗಿದ್ದಾರೆ. ಇನ್ನೊಂದಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ, ಗೆಲ್ಲಬೇಕು ಅನ್ನೋದು ಈ ಅಜ್ಜಿಯ ಆಸೆ. ಅದಕ್ಕಾಗಿ ಸಾಕಷ್ಟು ಪರಿಶ್ರಮಪಡುತ್ತಿದ್ದಾರೆ ಮನ್ ಕೌರ್.

ಈಕೆಯ ಮಗ ಗುರುದೇವ್ ಸಿಂಗ್ ಕೂಡ ಅಥ್ಲೀಟ್. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ್ದಾರೆ. 101ರ ಹರೆಯದಲ್ಲೂ ಮನ್ ಕೌರ್ ತಮ್ಮ ಫಿಟ್ನೆಸ್ ಹೇಗೆ ಕಾಪಾಡಿಕೊಳ್ತಾರೆ ಅನ್ನೋದೇ ಅಚ್ಚರಿಯ ಸಂಗತಿ. ಯುವ ಅಥ್ಲೀಟ್ ರೀತಿಯಲ್ಲೇ ಈಕೆ ಕೂಡ ಡಯಟ್ ಮಾಡ್ತಾರಂತೆ.

ಮೊಳಕೆ ಬರಿಸಿದ ಕಾಳಿನ ಹಿಟ್ಟಿನಿಂದ ಮಾಡಿದ 6 ರೊಟ್ಟಿ, ಮೊಳಕೆ ಬರಿಸಿದ ಕಡಲೆ, ಸೋಯಾ ಮಿಲ್ಕ್, ಕೆನೆರಹಿತ ಹಾಲು, ಹಣ್ಣು-ತರಕಾರಿ, ಜ್ಯೂಸ್ ಇರಲೇಬೇಕು. ಈಕೆಯ ಟ್ರೈನಿಂಗ್ ಕೂಡ ವಿಶಿಷ್ಟವಾಗಿರುತ್ತದೆ. ಜಿಮ್, ರನ್ನಿಂಗ್ ಜೊತೆಗೆ ಜಾವೆಲಿನ್ ಹಾಗೂ ಶಾಟ್ಪುಟ್ ಥ್ರೋ ಕೂಡ ಪ್ರಾಕ್ಟೀಸ್ ಮಾಡ್ತಾರೆ.

ಇನ್ನೊಂದು ವಿಶೇಷ ಅಂದ್ರೆ ಮನ್ ಕೌರ್ ಅಥ್ಲೆಟಿಕ್ಸ್ ಶುರು ಮಾಡಿದ್ದು, ಆಕೆ 93 ವರ್ಷದವರಿದ್ದಾಗ. ಮುಂದಿನ ವರ್ಷ ಸ್ಪೇನ್ ನಲ್ಲಿ ನಡೆಯಲಿರುವ ವರ್ಲ್ಡ್ ಮಾಸ್ಟರ್ಸ್ ನಲ್ಲಿ ಪಾಲ್ಗೊಳ್ಳಲು ಮನ್ ಕೌರ್ ತಯಾರಿ ನಡೆಸಿದ್ದಾರೆ. ಹತ್ತಾರು ಪ್ರಶಸ್ತಿಗಳು ಕೂಡ ಅವರನ್ನು ಅರಸಿ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...