alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟಿಗನಿಗೆ ಆಟವಾಡದಿದ್ದರೂ ಸಿಕ್ತು 2 ಕೋಟಿ ಹಣ

Mohammed-Shami

ಮುಂಬೈ: ಕೆಲಸ ಮಾಡಿದಾಗ ಹಣ ಪಡೆಯುವುದು ಸಾಮಾನ್ಯ. ಕೆಲವೊಮ್ಮೆ ಏನೂ ಮಾಡದಿದ್ದರೂ, ಹಣ ಕೈ ಸೇರುತ್ತದೆ. ಹೀಗೆ ಕ್ರಿಕೆಟ್ ಆಟಗಾರರೊಬ್ಬರು, ಪ್ರಮುಖ ಟೂರ್ನಿಯೊಂದರಲ್ಲಿ ಆಟವಾಡಲು ಸಾಧ್ಯವಾಗದಿದ್ದರೂ ಅವರಿಗೆ ಹಣ ಸಂದಾಯವಾಗಿದೆ.

ಟೀಂ ಇಂಡಿಯಾ ಹಾಗೂ ಬೆಂಗಾಲ್ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಆಗಿರುವ ಮೊಹಮ್ಮದ್ ಶಮಿ ಅವರಿಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ, 2.2 ಕೋಟಿ ರೂ. ನೀಡಲಾಗಿದೆ. 2015ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮೊಹಮ್ಮದ್ ಶಮಿ ಆಟವಾಡಿರಲಿಲ್ಲ. ಅದಕ್ಕಿಂತ ಮೊದಲು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ನಡೆದ ವಿಶ್ವಕಪ್ ನಲ್ಲಿ ಭಾಗವಹಿಸಿದ್ದರು. ಮಾತ್ರವಲ್ಲದೇ, ಹೆಚ್ಚು ವಿಕೆಟ್ ಗಳಿಸುವ ಮೂಲಕ ಟೀಂ ಇಂಡಿಯಾ ಯಶಸ್ಸಿಗೆ ಕಾರಣವಾಗಿದ್ದರು.

ಆದರೆ ಶಮಿ ಗಾಯಾಳುವಾಗಿದ್ದ ಕಾರಣ, ಐ.ಪಿ.ಎಲ್. ನಲ್ಲಿ ಆಟವಾಡಲು ಸಾಧ್ಯವಾಗಿರಲಿಲ್ಲ. ಆದರೂ ಅವರ ಸೇವೆಯನ್ನು ಪರಿಗಣಿಸಿ ಬಿ.ಸಿ.ಸಿ.ಐ. 2.2 ಕೋಟಿ ರೂ ಹಣ ನೀಡಿದೆ. ಅದೇ ರೀತಿ ವಿವಿಧ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದ ಮಾಜಿ ಆಟಗಾರ ಜಾವಗಲ್ ಶ್ರೀನಾಥ್ ಮತ್ತು ಕೇರಳದ ಅನಂತ ಪದ್ಮನಾಭನ್ ಅವರಿಗೆ 26 ಲಕ್ಷ ರೂ. ನೀಡಲಾಗಿದೆ. ಪ್ರಸ್ತುತ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ಟೂರ್ನಿಗೆ ವೆಸ್ಟ್ ಇಂಡೀಸ್ ಗೆ ತೆರಳಿದ್ದು, ಶಮಿ ಭಾಗವಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...