alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟೀವನ್ ಸ್ಮಿತ್ ರನ್ನು ಹಿಂದಿಕ್ಕಿ ನಂಬರ್ 1 ಪಟ್ಟಕ್ಕೇರಿದ ಕೊಹ್ಲಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ರನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟಕ್ಕೇರಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ಪಿಂಕ್ ಟೆಸ್ಟ್ ನಲ್ಲಿ 133 ರನ್ ಸಿಡಿಸಿದ್ದ ವಿರಾಟ್ ಕೊಹ್ಲಿ ತಮ್ಮ ಅಂಕ ಗಳಿಕೆಯನ್ನು ಹೆಚ್ಚಿಸಿಕೊಂಡಿದ್ದರು. ಅತ್ತ ಪಾಕಿಸ್ತಾನ ವಿರುದ್ಧ ಅಡಿಲೇಡ್ ನಲ್ಲಿ ನಡೆದ ಟೆಸ್ಟ್ ನಲ್ಲಿ ಸ್ಟೀವನ್ ಸ್ಮಿತ್ ಕೇವಲ 36 ರನ್ ಗಳಿಸಿದ್ದರಿಂದ ಅವರ ಅಂಕ ಗಳಿಕೆ ಇಳಿಕೆಯಾಗಿತ್ತು. ಇದರಿಂದಾಗಿ ವಿರಾಟ್ ಕೊಹ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಐಸಿಸಿ ಟಾಪ್ ಟೆನ್ ರ್ಯಾಂಕಿಂಗ್ ಪಟ್ಟಿ ಈ ಕೆಳಕಂಡಂತಿದೆ.

ಬ್ಯಾಟಿಂಗ್ ವಿಭಾಗ:

ವಿರಾಟ್ ಕೊಹ್ಲಿ
ಸ್ಟೀವನ್ ಸ್ಮಿತ್
ಕೇನ್ ವಿಲಿಯಮ್ಸನ್
ಚೇತೇಶ್ವರ ಪೂಜಾರ
ಡೇವಿಡ್ ವಾರ್ನರ್
ಅಜಿಂಕ್ಯಾ ರಹಾನೆ
ಜೋ ರೂಟ್
ಮಾರ್ನಸ್ ಲಬುಶೇನ್
ಹೆನ್ರಿ ನಿಕೋಲ್ಸ್

ಬೌಲಿಂಗ್ ವಿಭಾಗ:

ಪ್ಯಾಟ್ ಕಮಿನ್ಸ್
ಕಗಿಸೊ ರಬಾಡಾ
ಜೇಸನ್ ಹೋಲ್ಡರ್
ನೀಲ್ ವಾಗ್ನರ್
ಜಸ್ಪ್ರೀತ್ ಬೂಮ್ರಾ
ವೆರ್ನಾನ್ ಫಿಲ್ಯಾಂಡರ್
ಜೇಮ್ಸ್ ಅಂಡರ್ಸನ್
ಜೋಶ್ ಹ್ಯಾಸಲ್ ವುಡ್
ಆರ್. ಅಶ್ವಿನ್
ಮಹಮದ್ ಶಮಿ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...