alex Certify
ಕನ್ನಡ ದುನಿಯಾ       Mobile App
       

Kannada Duniya

ರಿಯೊ ಒಲಂಪಿಕ್ಸ್ : ಮಹಿಳೆ ಸೂಟ್ ಕೇಸ್ ನಲ್ಲಿ ಬಾಲಕ

mail

ಸದ್ಯ ಎಲ್ಲರ ಕಣ್ಣು ರಿಯೊ ಒಲಂಪಿಕ್ಸ್ ಮೇಲಿದೆ. ಭಯೋತ್ಪಾದಕರ ಕರಿ ನೆರಳಿನ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ನಡುವೆ ರಿಯೊ ಸ್ಥಳದಿಂದ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ.

ನಿನ್ನೆ ರಿಯೊದಲ್ಲಿ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ತನ್ನ ಸೂಟ್ ಕೇಸ್ ನಲ್ಲಿ 11 ವರ್ಷದ ಬಾಲಕನನ್ನು ತುಂಬಿಕೊಂಡು ಹೋಗ್ತಿದ್ದಳು ಎನ್ನಲಾಗಿದೆ. ದಕ್ಷಿಣ ಬ್ರೆಜಿಲ್ ನಿಂದ 550 ಮೈಲಿ ಪ್ರಯಾಣ ಮಾಡಿ ಆಕೆ ರಿಯೊಗೆ ಆಗಮಿಸಿದ್ದಾಳೆ. ಸಹ ಪ್ರಯಾಣಿಕರಿಗೆ ಸೂಟ್ ಕೇಸ್ ನಲ್ಲಿ ಕೈ ಕಾಣಿಸಿದೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಸೂಟ್ ಕೇಸ್ ನಲ್ಲಿ ಬಾಲಕನಿರುವುದು ತಿಳಿದು ಬಂದಿದೆ.

ರೆಡ್ ಲೈಟ್ ಏರಿಯಾದಲ್ಲಿ ಬಾಲಕ ಸಿಕ್ಕಿದ್ದಾನೆಂದು ಮಹಿಳೆ ಹೇಳ್ತಿದ್ದಾಳೆ. ದಾರಿಯಲ್ಲಿ ನಿಂತಿದ್ದ ಬಾಲಕ ರಕ್ಷಣೆ ಮಾಡುವಂತೆ ಕೇಳಿದ್ದನಂತೆ. ಹಾಗಾಗಿ ಆತನನ್ನು ಸೂಟ್ ಕೇಸ್ ನಲ್ಲಿ ತುಂಬಿ ತಂದಿರುವುದಾಗಿ ಮಹಿಳೆ ಹೇಳ್ತಿದ್ದಾಳೆ. ಬಾಲಕನ್ನು ರಕ್ಷಿಸಲಾಗಿದ್ದು, ಮಹಿಳೆಯ ವಿಚಾರಣೆ ಮುಂದುವರೆದಿದೆ. ಮಹಿಳೆ ಆರೋಪ ಸಾಬೀತಾದ್ರೆ ಆಕೆಗೆ 2 ರಿಂದ 6 ವರ್ಷ ಜೈಲು ಶಿಕ್ಷೆಯಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...