alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಲುವಿನ ನಂತ್ರ ಕೊಹ್ಲಿಗೆ ಅನುಷ್ಕಾರಿಂದ ಅಭಿನಂದನೆ –ಸದ್ಯವೇ ಆಗಲಿದೆ Patch up!

virat_

ಸದ್ಯ ಭಾರತದ ಬ್ಯಾಟ್ಸ್ ಮೆನ್ ವಿರಾಟ್ ಕೊಹ್ಲಿಯದ್ದೇ ಮಾತು. ವಿರಾಟ್ ಆಟವನ್ನುಅಭಿಮಾನಿಗಳು ಹಾಡಿ ಹೊಗಳ್ತಿದ್ದಾರೆ. ಆದ್ರೆ ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ನಂತ್ರ ವಿರಾಟ್ ಕೊಹ್ಲಿಗೆ ವಿಶೇಷ ಶುಭಾಷಯವೊಂದು ಸಿಕ್ಕಿದೆ. ಈ ಅಭಿನಂದನೆ ಸಿಕ್ಕಿರೋದು ಬೇರೆ ಯಾರಿಂದಲೂ ಅಲ್ಲ, ಕೊಹ್ಲಿ ಗರ್ಲ್ ಫ್ರೆಂಡ್ ಅನುಷ್ಕಾ ಶರ್ಮಾರಿಂದ.

ಯಸ್, ಪಾಕ್ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಕೊಹ್ಲಿಗೆ ಅನುಷ್ಕಾ ವಿಶ್ ಮಾಡಿದ್ದಾರಂತೆ. ಹಾಗಂತ ಬಲ್ಲ ಮೂಲಗಳು ಹೇಳ್ತಾ ಇವೆ. ಇದು ಅನುಷ್ಕಾ ಹಾಗೂ ಕೊಹ್ಲಿ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಇಬ್ಬರನ್ನು ಮತ್ತೆ ಒಂದಾಗಿ ನೋಡಬಹುದೆಂದು ಖುಷಿಪಡ್ತಿದ್ದಾರೆ ಅಭಿಮಾನಿಗಳು.

ಈ ಹಿಂದೆ ಕೊಹ್ಲಿ ಹಾಗೂ ಅನುಷ್ಕಾ ನಡುವೆ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿ ಹಬ್ಬಿತ್ತು. ಕೊಹ್ಲಿ ಮದುವೆ ಆಫರನ್ನು ಅನುಷ್ಕಾ ನಿರಾಕರಿಸಿದ್ದೇ ಇದಕ್ಕೆ ಕಾರಣ ಎನ್ನಲಾಗ್ತಾ ಇತ್ತು. ಆದ್ರೆ ಫ್ಯಾಷನ್ ನಿಯತಕಾಲಿಕೆಯೊಂದು ಬ್ರೇಕ್ ಅಪ್ ಆಗಿಲ್ಲ. ಇಬ್ಬರ ನಡುವೆ ಜಗಳವಾಗಿದೆ ಎಂದು ಸ್ಪಷ್ಟಪಡಿಸಿದೆ.

ಏಷ್ಯಾಕಪ್ ಗಿಂತ ಮೊದಲು ರಜಾ ನೀಡುವಂತೆ ವಿರಾಟ್ ಬಿಸಿಸಿಐಗೆ ಕೇಳಿದ್ದರು. ರಜಾ ಕೂಡ ಸಿಕ್ಕಿತ್ತು. ಅನುಷ್ಕಾ ಜೊತೆ ರಜಾ ಕಳೆಯುವ ಪ್ಲಾನ್ ನಲ್ಲಿದ್ದರು ಕೊಹ್ಲಿ. ಆದ್ರೆ ‘ಸುಲ್ತಾನ್’ ಚಿತ್ರದ ಶೂಟಿಂಗ್ ಗಾಗಿ ಅನುಷ್ಕಾ, ಕೊಹ್ಲಿ ಜೊತೆ ಬರಲಿಲ್ಲ. ಇದೇ ವಿಚಾರಕ್ಕೆ ಗಲಾಟೆ ನಡೆದಿದೆ. ಇಬ್ಬರು ಮುನಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅನ್ ಫಾಲೋ ಮಾಡಿದ್ದಾರೆ ಎನ್ನಲಾಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...