alex Certify
ಕನ್ನಡ ದುನಿಯಾ       Mobile App
       

Kannada Duniya

ಮೈ ಕೊರೆಯುತ್ತಿದೆ ಮಾಗಿಯ ಚಳಿ

1384cold_generic_360x270

ಕಳೆದ ವಾರದಿಂದ ವಾತಾವರಣದಲ್ಲಿ ಬದಲಾವಣೆಯಾಗಿದ್ದು, ಚಳಿಯ ಹೊಡೆತಕ್ಕೆ ಜನ ಕಂಗಾಲಾಗಿದ್ದಾರೆ. ಮಾಗಿಯ ಮೈಕೊರೆಯುವ ಚಳಿಗೆ ಥರಗುಟ್ಟುವಂತಾಗಿದ್ದು, ಮೂಲೆ ಸೇರಿಕೊಂಡಿದ್ದ ಸ್ವೆಟರ್, ಜರ್ಕಿನ್ ಹುಡುಕಿ ಹಾಕಿಕೊಳ್ಳುವಂತಾಗಿದೆ.

ಪ್ರತಿ ವರ್ಷದಂತೆಯೇ ಈ ಬಾರಿ ಚಳಿಗಾಲ ಆರಂಭವಾದರೂ ಜನರಿಗೆ ಚಳಿಯ ಅನುಭವ ಆಗಿರಲಿಲ್ಲ. ಹಾಗಾಗಿ ಜನ ಮಳೆಗಾಲದಲ್ಲಿ ಮಳೆ ಬರಲ್ಲ, ಚಳಿಗಾಲದಲ್ಲಿ ಚಳಿಯೂ ಇಲ್ಲ ಎಂದೆಲ್ಲಾ ಹೇಳುತ್ತಿದ್ದರು. ಆದರೆ, ಕಳೆದ ವಾರದಿಂದ ಮೈ ಕೊರೆಯುವ ಚಳಿಯ ಹೊಡೆತಕ್ಕೆ ಜನ ತತ್ತರಿಸಿದ್ದಾರೆ. ಸಣ್ಣ ಮಕ್ಕಳಿಗಂತೂ ವಾತಾವರಣದ ಬದಲಾವಣೆಯಿಂದಾಗಿ ಶೀತ, ಜ್ವರ ಬರತೊಡಗಿದೆ. ದೊಡ್ಡವರು ಮೈ ಕೊರೆಯುವ ಚಳಿಗೆ ನಲುಗಿ ಹೋಗಿದ್ದು, ಬೆಚ್ಚನೆಯ ಉಡುಗೆಗಳ ಮೊರೆ ಹೋಗಿದ್ದಾರೆ.

ಬೆಳಿಗ್ಗೆ ವಾಕ್ ಹೋಗುವವರ ಪಾಡಂತೂ ಹೇಳತೀರದಾಗಿದೆ. ಬೆಳಗಿನ ಜಾವ ಕೆಲಸಕ್ಕೆ ಹೋಗುವವರ ಸ್ಥಿತಿ ಇನ್ನೂ ಕಷ್ಟಕರವಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಅಲ್ಲಲ್ಲಿ ಬೆಂಕಿ ಹಾಕಿಕೊಂಡು ಮೈ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಒಟ್ಟಾರೆ ಮೈ ನಡುಗುವ ಚಳಿಯಿಂದ ತಡೆದುಕೊಳ್ಳುವುದಂತೂ ಕಷ್ಟಸಾಧ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...