alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಪ್ ಬಳಕೆದಾರರು ಓದಲೇಬೇಕಾದ ಸುದ್ದಿ

whats-app

ವಾಟ್ಸಪ್ ನಲ್ಲಿ ಗ್ರೂಪ್ ಚಾಟ್ ಜಾಸ್ತಿಯಾಗ್ತಾ ಇದೆ. ಬಗೆ ಬಗೆಯ ಜನರು ಒಂದಾಗಿ ಮಾತುಕತೆ ನಡೆಸುವ, ಚರ್ಚೆ ಮಾಡುವ ವೇದಿಕೆಯಾಗಿದೆ ಗ್ರೂಪ್. ಆದ್ರೆ ಇನ್ನು ಮುಂದೆ ಗ್ರೂಪ್ ಎಡ್ಮಿನ್ ಗಳು ಎಚ್ಚರವಾಗಿರಬೇಕು. ಒಪ್ಪಿಗೆ ಇಲ್ಲದೆ ಯಾರನ್ನಾದ್ರೂ ಗ್ರೂಪ್ ಗೆ ಸೇರಿಸಿದರೆ ನಿಮಗೆ ತೊಂದರೆಯಾಗಬಹುದು. ಹೇಳದೆ ಕೇಳದೆ ಗ್ರೂಪ್ ಗೆ ಸೇರಿಸಿದ ಎಡ್ಮಿನ್ ಒಬ್ಬ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾನೆ.

ಘಟನೆ ಪುಣೆಯಲ್ಲಿ ನಡೆದಿದೆ. ಪುಣೆಯ ಹಸ್ಮುಕ್ ರಮೀನಾ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈಗ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಒಪ್ಪಿಗೆ ಇಲ್ಲದೆ ರಶ್ಮಿ ಎಂಬ ಮಹಿಳೆಯನ್ನು ಗ್ರೂಪ್ ಗೆ ಎಡ್ಮಿನ್ ಹಸ್ಮುಕ್ ಸೇರಿಸಿದ್ದಾನೆ. ಆ ಗ್ರೂಪ್ ನಿಂದ ಅಶ್ಲೀಲ ಮೆಸ್ಸೇಜ್ ಗಳು ಬರ್ತಾ ಇದ್ದವಂತೆ. ಇದರಿಂದ ಬೇಸತ್ತಿದ್ದ ರಶ್ಮಿ ಕಳೆದ ಜುಲೈನಲ್ಲಿ ದೂರು ನೀಡಿದ್ದರು.

ಒಮ್ಮೆ ಮಾತ್ರ ರಶ್ಮಿ, ಹಸ್ಮಿಕ್ ಭೇಟಿ ಮಾಡಿದ್ದರಂತೆ. ಅದೇ ಆಧಾರದ ಮೇಲೆ ಸಚ್ ಕಾ ಸಾಮ್ನಾ ಗ್ರೂಪ್ ಗೆ ಸೇರಿಸಿದ್ದ ಹಸ್ಮಿಕ್. ಅಲ್ಲಿಂದ ರಶ್ಮಿ ಹೊರಬಂದ್ರೆ ಆಮನಾ –ಸಾಮನಾ ಎಂಬ ಗುಂಪಿಗೆ ಸೇರಿಸಿದ್ದನಂತೆ. ಅಲ್ಲಿಂದ ಬರುವ ಮೆಸ್ಸೇಜ್ ಚಿತ್ರಹಿಂಸೆ ನೀಡುತ್ತಿತ್ತಂತೆ. ಜುಲೈನಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಲ್ಲಿಂದ ಇಲ್ಲಿಯವರೆಗೆ ಹುಟುಕಾಟ ನಡೆಸಿ, ಎರಡು ದಿನಗಳ ಹಿಂದೆ ಹಸ್ಮುಕ್ ನನ್ನು ಬಂಧಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...