alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಶಾಸಕನಿಗೆ ಮತ್ತೆ ಸಂಕಷ್ಟ ತಂದ ಅಶ್ಲೀಲ ವಿಡಿಯೋ

ಉಡುಪಿ: ಹಿಂದೆ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಅವರದ್ದೆನ್ನಲಾದ ವಿಡಿಯೋ ಭಾರೀ ಸದ್ದು ಮಾಡಿತ್ತು. ಅವರ ರಾಜಕೀಯ ಭವಿಷ್ಯಕ್ಕೂ ಕಂಟಕವಾಗಿತ್ತು.

ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ರಘುಪತಿ ಭಟ್ ಉಡುಪಿ ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈಗ ಮತ್ತೆ ಅದೇ ವಿಡಿಯೋ ಹರಿದಾಡತೊಡಗಿದ್ದು, ಸಂಕಷ್ಟ ತಂದೊಡ್ಡಿದೆ.

ರಘುಪತಿ ಭಟ್ ಅವರನ್ನು ಹೋಲುವಂತಹ ವ್ಯಕ್ತಿ, ಯುವತಿಯೊಂದಿಗೆ ಆಪ್ತವಾಗಿರುವ ದೃಶ್ಯಗಳು ವಿಡಿಯೋದಲ್ಲಿದ್ದು, ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಚುನಾವಣೆಯಲ್ಲಿ ತಮ್ಮನ್ನು ಎದುರಿಸಲಾಗದವರು ಇಂತಹ ಷಡ್ಯಂತ್ರದ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಘಟನೆಯೊಂದರ ಜಿಲ್ಲಾಧ್ಯಕ್ಷರ ವಿರುದ್ಧ ರಘುಪತಿ ಭಟ್ ಮಣಿಪಾಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ, ನಾನು ಯಾವುದೇ ವಿಡಿಯೋ ಶೇರ್ ಮಾಡಿಲ್ಲ, ಅದನ್ನು ಚಿತ್ರೀಕರಿಸಿದವರು ಮತ್ತು ಜಾಲತಾಣದಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಕೇಸ್ ಹಾಕಲಿ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...