alex Certify
ಕನ್ನಡ ದುನಿಯಾ       Mobile App
       

Kannada Duniya

ಜೆ.ಡಿ.ಎಸ್. ಮುಖಂಡರ ಮನೆಯಲ್ಲಿ ಸಿಕ್ಕಿದ್ದೇನು ಗೊತ್ತಾ?

ತುಮಕೂರು: ಜೆ.ಡಿ.ಎಸ್. ಟಿಕೆಟ್ ಆಕಾಂಕ್ಷಿ ಬೆಂಬಲಿಗರ ಮನೆಯ ಮೇಲೆ ದಾಳಿ ಮಾಡಿರುವ ಚುನಾವಣಾಧಿಕಾರಿಗಳು, ಬಾಂಡ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಬಾಂಡ್ ವಿತರಿಸಿ, ತಮ್ಮ ಪರವಾಗಿ ಮತ ಹಾಕುವಂತೆ ಜೆ.ಡಿ.ಎಸ್. ಆಕಾಂಕ್ಷಿ ಬೆಂಬಲಿಗರು ಮನವಿ ಮಾಡಿದ್ದರೆನ್ನಲಾಗಿದೆ. ಈ ಮಾಹಿತಿ ತಿಳಿದ ಬಿ.ಜೆ.ಪಿ. ಕಾರ್ಯಕರ್ತರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ತುಮಕೂರು ತಾಲ್ಲೂಕು ಮಲ್ಲಸಂದ್ರದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರ ಮನೆಯ ಮೇಲೆ ಚುನಾವಣಾಧಿಕಾರಿಗಳು ದಾಳಿ ಮಾಡಿ, ತಲಾ 10,000 ರೂ. ಬೆಲೆಯ ನೂರಾರು ಬಾಂಡ್ ಗಳನ್ನು ವಶಕ್ಕೆ ಪಡೆದಿದ್ದಾರೆ. ತುಮಕೂರು ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತುಮಕೂರು ಗ್ರಾಮಾಂತರ ಜೆ.ಡಿ.ಎಸ್. ಟಿಕೆಟ್ ಆಕಾಂಕ್ಷಿಯ ಪರವಾಗಿ ಬಾಂಡ್ ವಿತರಿಸಲಾಗುತ್ತಿತ್ತು ಎನ್ನಲಾಗಿದ್ದು, ಚುನಾವಣಾಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...