alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ತಿಮ್ಮಪ್ಪನಿಗೆ ಬಡ್ಡಿಯಿಂದಲೇ ಬರುತ್ತೆ 80 ಕೆ.ಜಿ. ಬಂಗಾರ

3877a-ತಿರುಮಲ: ಭಾರತದ ಸಿರಿವಂತ ದೇವರು ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ ಕಾಣಿಕೆಯಾಗಿ ಬಂದಿರುವ ಬಂಗಾರವನ್ನು ಬ್ಯಾಂಕಿನಲ್ಲಿ ಠೇವಣಿಯಾಗಿಟ್ಟಿದ್ದು, ಇದರ ಬಡ್ಡಿಯಿಂದಲೇ ಪ್ರತಿ ವರ್ಷ 80 ಕೆ.ಜಿ. ಬಂಗಾರ ಬರುತ್ತಿದೆಯೆಂಬ ಮಾಹಿತಿ ಹೊರ ಬಿದ್ದಿದೆ.

ತಿಮ್ಮಪ್ಪನಿಗೆ ಸೇರಿದ ಒಟ್ಟು 4.5 ಟನ್ ಬಂಗಾರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಗಳಲ್ಲಿ ಠೇವಣಿಯಾಗಿ ಇಟ್ಟಿದ್ದು, ಇದರ ಮೇಲಿನ ಬಡ್ಡಿಯನ್ನು ಶುದ್ದ ಬಂಗಾರದ ರೂಪದಲ್ಲಿ ಪಡೆಯಲಾಗುತ್ತಿದೆ. ಠೇವಣಿಯಾಗಿಟ್ಟಿರುವ 4.5 ಟನ್ ಬಂಗಾರಕ್ಕೆ ಮಾರುಕಟ್ಟೆಯ ಬಂಗಾರದ ಮೌಲ್ಯವನ್ನಾಧರಿಸಿ ಪ್ರತಿ ವರ್ಷ 80 ಕೆ.ಜಿ. ಬಂಗಾರ ಬಡ್ಡಿಯ ರೂಪದಲ್ಲಿ ಸೇರ್ಪಡೆಯಾಗುತ್ತಿದೆ ಎನ್ನಲಾಗಿದೆ.

ಈ ಸಾಲಿನಲ್ಲೂ ಭಕ್ತರಿಂದ ಒಂದು ಟನ್ ಬಂಗಾರ ಕಾಣಿಕೆಯಾಗಿ ಬಂದಿದೆ ಎನ್ನಲಾಗಿದ್ದು, ಇದನ್ನೂ ಸಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಠೇವಣಿಯಾಗಿರಿಸಲು ತಿರುಪತಿ ತಿರುಮಲ ಆಡಳಿತ ಮಂಡಳಿ ತೀರ್ಮಾನಿಸಿದೆ. ತಿರುಪತಿ ತಿಮ್ಮಪ್ಪನ ಬಳಿ ಈಗ ಒಟ್ಟು 5.5 ಟನ್ ಬಂಗಾರ ಇದ್ದಂತಾಗಿದ್ದು, ಇದರ ಒಟ್ಟು ಮೌಲ್ಯ ಬರೋಬ್ಬರಿ 1,320 ಕೋಟಿ ರೂಪಾಯಿಗಳಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...