alex Certify
ಕನ್ನಡ ದುನಿಯಾ       Mobile App
       

Kannada Duniya

‘ಸೆಲ್ಫಿ ವಿತ್ ಡಾಟರ್’ ಆರಂಭವಾದ ಹಿಂದಿನ ಕಥೆ ಇಲ್ಲಿದೆ ನೋಡಿ..!

830406lead3ಹರಿಯಾಣದ ಬಿಬಿಪುರದಲ್ಲಿ ಸರಪಂಚ್ ಆಗಿರುವ ಸುನೀಲ್ ಜಗ್ಲನ್ ಆರಂಭಿಸಿರುವ ‘ಸೆಲ್ಫಿ ವಿತ್ ಡಾಟರ್’ ಸ್ಪರ್ಧೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಯವರು ಬಾನುಲಿಯಲ್ಲಿ ಪ್ರಸಾರವಾಗುವ ತಮ್ಮ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ‘ಸೆಲ್ಫಿ ವಿತ್ ಡಾಟರ್’ ಹುಟ್ಟಿಕೊಂಡಿದ್ದೇಗೆ ಎಂಬುದನ್ನು ತಿಳಿಯಲು ಇದನ್ನು ಓದಿ.

24 ಜನವರಿ 2012 ರಂದು ಮಧ್ಯ ರಾತ್ರಿ ಸುನೀಲ್ ಜಗ್ಲನ್ ಅವರ ಪತ್ನಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಖುಷಿಗೊಂಡ ಜಗ್ಲನ್ ಆಸ್ಪತ್ರೆಯಲ್ಲಿದ್ದ ನರ್ಸ್ ಹಾಗೂ ಇತರೆ ಸಿಬ್ಬಂದಿಯವರಿಗೆ ಸಿಹಿ ವಿತರಿಸಲು ಮುಂದಾದರು. ಆ ವೇಳೆ ಕೆಲವರು ಗಂಡು ಮಗುವಾಗಿದ್ದರೆ ಇನ್ನಷ್ಟು ಸಂಭ್ರಮ ಸಿಗುತ್ತಿತ್ತು ಎಂಬ ಮಾತುಗಳನ್ನಾಡಿದ್ದರು.

ಇದು ಸುನೀಲ್ ಅವರಲ್ಲಿ ಆಶ್ಚರ್ಯ ಮೂಡಿಸಿತ್ತು. ಏಕೆಂದರೆ ಜಗ್ಲನ್ ದಂಪತಿಗಳು ಹೆಣ್ಣು ಅಥವಾ ಗಂಡು ಯಾವ ಮಗುವಾದರೂ ಸರಿ ಹುಟ್ಟುವ ಮಗು ಆರೋಗ್ಯವಾಗಿದ್ದರೆ ಸಾಕು ಎಂಬ ನಿಲುವು ಹೊಂದಿದ್ದರು. ತಮಗೆ ಹೆಣ್ಣು ಮಗು ಹುಟ್ಟಿದೆಯೆಂಬ ಯಾವ ತಾರತಮ್ಯದ ಭಾವನೆಯೂ ಅವರಲ್ಲಿ ಮೂಡಿರಲಿಲ್ಲ. ಆದರೆ ಆಸ್ಪತ್ರೆಯಲ್ಲಿ ಅಂದು ಕೆಲವರಾಡಿದ ಮಾತುಗಳು ಅವರನ್ನು ಚಿಂತನೆಗೀಡು ಮಾಡಿತ್ತು.

ಹೀಗಾಗಿ ಹೆಣ್ಣು ಮಗುವಿನ ಮಹತ್ವವನ್ನು ಸಾರಲು ಸುನೀಲ್ ಜಗ್ಲನ್ ಮುಂದಾದರು. ಇದಕ್ಕಾಗಿ ಹಲವು ಕಾರ್ಯಕ್ರಮಗಳನ್ನೂ ಅವರು ಹಮ್ಮಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ವಿವಿಧ ದೇಶಗಳ ಭೇಟಿ ವೇಳೆ ಆ ರಾಷ್ಟ್ರದ ನಾಯಕರೊಂದಿಗೆ ತಮ್ಮ ಸೆಲ್ಫಿ ತೆಗೆದುಕೊಳ್ಳುತ್ತಿದ್ದನ್ನು ಮಾಧ್ಯಮಗಳಿಂದ ಅರಿತಿದ್ದ ಸುನೀಲ್ ಜಗ್ಲನ್ ‘ಸೆಲ್ಫಿ ವಿತ್ ಡಾಟರ್’ ಆರಂಭಿಸಿದರೆ ಅದಕ್ಕೆ ಇನ್ನಷ್ಟು ವ್ಯಾಪಕ ಪ್ರಚಾರ ದೊರೆಯಬಹುದು. ಆ ಮೂಲಕ ಹೆಣ್ಣು ಮಕ್ಕಳ ಮಹತ್ವ ಕುರಿತು ಮನವರಿಕೆಯಾಗಬಹುದೆಂದು ಚಿಂತಿಸಿ ಈ ಕುರಿತ ಸ್ಪರ್ಧೆಯನ್ನೇ ಘೋಷಿಸಿದರು. ಅವರು ಹರಿಯಾಣದ ಪುಟ್ಟ ಗ್ರಾಮದಲ್ಲಿ ಆರಂಭಿಸಿದ ‘ಸೆಲ್ಫಿ ವಿತ್ ಡಾಟರ್’ ಗೆ ಇಂದು ವಿಶ್ವದೆಲ್ಲೆಡೆಯಿಂದ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದನ್ನು ಆರಂಭಿಸಿದ್ದಕ್ಕಾಗಿ ಸುನೀಲ್ ಜಗ್ಲನ್ ಅವರನ್ನು ಅಭಿನಂದಿಸಿ ದಿನ ನಿತ್ಯ ನೂರಾರು ಫೋನ್ ಕಾಲ್ ಗಳು ಬರುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...