alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಏನು ತಿಂತಾರೆ ಗೊತ್ತಾ?

strongest-man-

ಹತ್ತೋ, ಇಪ್ಪತ್ತೋ ಮೊಟ್ಟೆಯಲ್ಲ, ಪ್ರತಿದಿನ 60 ಮೊಟ್ಟೆ ತಿನ್ನುತ್ತಾರೆ ಆ ವ್ಯಕ್ತಿ. ಅಷ್ಟೆ ಅಲ್ಲ ಅವರ ಆಹಾರ ಕ್ರಮ ಕೇಳಿದ್ರೆ ಆಶ್ಚರ್ಯವಾಗುತ್ತೆ. ಅವರ್ಯಾರು ಗೊತ್ತಾ?

60 ಮೊಟ್ಟೆ ತಿನ್ನುವ ಆ ವ್ಯಕ್ತಿ ಬೇರೆ ಯಾರೂ ಅಲ್ಲ, ‘ಭಾರತದ ಶಕ್ತಿಶಾಕಿ ವ್ಯಕ್ತಿ 2016’ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿರುವ ಲೇಖರಾಜ್ ಅಲಿಯಾಸ್ ಸನ್ನಿ. ಪ್ರತಿದಿನ ಕೇವಲ 60 ಮೊಟ್ಟೆ ಮಾತ್ರವಲ್ಲ ಸನ್ನಿ 1 ಕೆಜಿ ಚಿಕನ್, ಎರಡು ಡಜನ್ ಬಾಳೆ ಹಣ್ಣು, ಎರಡು ಗ್ಲಾಸ್ ಜ್ಯೂಸ್, ಎರಡು ಲೀಟರ್ ಹಾಲು ಕುಡಿತಾರೆ.

ಸನ್ನಿಗೆ ಹರದೀಪ್ ಸಿಂಗ್ ತರಬೇತಿ ನೀಡುತ್ತಿದ್ದಾರೆ. ಸನ್ನಿ 24 ನೇ ವಯಸ್ಸಿನಲ್ಲಿ ತರಬೇತಿ ಶುರು ಮಾಡಿದರಂತೆ. ಮೂರು ವರ್ಷಗಳ ನಂತರ ಅವರ ಪ್ರಯತ್ನಕ್ಕೆ ಫಲ ಸಿಗ್ತಾ ಇದೆ. ತರಬೇತುದಾರ ಹರದೀಪ್ ಕೂಡ ಶಕ್ತಿಶಾಲಿ ವ್ಯಕ್ತಿಯೇ. ಅವರು ಎರಡು ಬಾರಿ ‘ಮಿಸ್ಟರ್ ಇಂಡಿಯಾ’ ಆಗಿದ್ದಾರೆ.

ಪಂಜಾಬಿನ ಒಂದು ಹಳ್ಳಿಯ ನಿವಾಸಿ ಸನ್ನಿ ಉದ್ಯೋಗ ಹುಡುಕುತ್ತ ಮೊಹಾಲಿಗೆ ಬಂದಿದ್ದರು. ಈಗ ಇಲ್ಲಿಯೇ ತರಬೇತಿ ಪಡೆಯುತ್ತಿದ್ದಾರೆ. WWE ಉತ್ತಮ ಪವರ್ ಲಿಪ್ಟರ್ ಎಂದು ಸನ್ನಿಯನ್ನು ಆಯ್ಕೆ ಮಾಡಿದೆ. ಎರಡು ಸುತ್ತು ವಿಜೇತರಾಗಿರುವ ಸನ್ನಿ, ದೆಹಲಿಯಲ್ಲಿ ನಡೆಯುವ ಅಂತಿಮ ಸುತ್ತಿಗೆ ತಯಾರಿ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...