alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಫ್ಯಾನ್ ಗೆ ನೇಣು ಬಿಗಿದುಕೊಳ್ಳೋಕಾಗಲ್ಲ..!

2017_4image_17_42_416958262sucide-ll

ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ. ಈ ಸುದ್ದಿಯನ್ನು ನಾವು ಸಾಕಷ್ಟು ಕೇಳಿರ್ತೇವೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಸುದ್ದಿ ಕೇಳಿ ಸುಮ್ಮನಾಗೋದು ಬಿಟ್ಟರೆ ಬೇರೆ ದಾರಿ ನಮಗೆ ಕಂಡಿಲ್ಲ. ಆದ್ರೆ ಇನ್ಮುಂದೆ ಇಂಥ ಘಟನೆಗಳಾಗುವುದನ್ನು ನಾವು ಸುಲಭವಾಗಿ ತಪ್ಪಿಸಬಹುದು. ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹೊಸ ಆವಿಷ್ಕಾರವಾಗಿದೆ.

ಮುಂಬೈನ ಶರದ್ ಆಶಾನಿ ಹೊಸ ಫ್ಯಾನ್ ಆವಿಷ್ಕಾರ ಮಾಡಿದ್ದಾರೆ. ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ನಿವೃತ್ತಿಯಾಗಿರುವ ಶರದ್ ಆತ್ಮಹತ್ಯೆ ವಿರೋಧಿ ಫ್ಯಾನ್ ಕಂಡು ಹಿಡಿದಿದ್ದಾರೆ. ಈ ಫ್ಯಾನ್ ಒಂದು ಮಟ್ಟದ ತೂಕವನ್ನು ಮಾತ್ರ ತಡೆದುಕೊಳ್ಳುತ್ತದೆ. ಮಿತಿಗಿಂತ ಹೆಚ್ಚು ಭಾರವಾದ್ರೆ ಫ್ಯಾನ್ ರಾಡ್ ಕೆಳಗೆ ಬರುವ ಜೊತೆಗೆ ಪಂಕದಿಂದ ಬೇರ್ಪಡುತ್ತದೆ.

ರಾಡ್ ಎರಡು ಭಾಗಗಳನ್ನು ಹೊಂದಿದೆ. ಈ ಎರಡೂ ಭಾಗಗಳನ್ನು ಸೇರಿಸಲು ಸ್ಪ್ರಿಂಗ್ ಬಳಸಲಾಗಿದೆ. ಈ ರಾಡ್ ಕೇವಲ 18 ಕೆಜಿ ತೂಕವನ್ನು ಮಾತ್ರ ತಡೆದುಕೊಳ್ಳಲಿದೆ. ದೇಶದಲ್ಲಿ ವರ್ಷವೊಂದಕ್ಕೆ 60 ಸಾವಿರಕ್ಕಿಂತ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದ್ರಲ್ಲೂ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...