alex Certify
ಕನ್ನಡ ದುನಿಯಾ       Mobile App
       

Kannada Duniya

ಸಿ.ಎಂ. ಕರೆದ್ರೂ ಬರಲ್ಲ ಎಂದ ಮರಿಸ್ವಾಮಿ ನಿಷ್ಠೆಗೆ ಹೆಚ್.ಡಿ.ಕೆ. ಮೆಚ್ಚುಗೆ

ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಂದು ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಸ್ವಾರಸ್ಯಕರ ಘಟನೆಯೊಂದು ನಡೆದಿದೆ.

ಹಿಂದೆ ಸಿ.ಎಂ.ಗೆ ಪರಿಚಿತರಾಗಿದ್ದ ಹಳೆಕೆಸರೆ ಗ್ರಾಮದ ಮರಿಸ್ವಾಮಿ ಜೆ.ಡಿ.ಎಸ್. ಪಕ್ಷದಲ್ಲಿದ್ದಾರೆ. ಸಿದ್ಧರಾಮಯ್ಯ ಪ್ರಚಾರ ನಡೆಸುವ ಸಂದರ್ಭದಲ್ಲಿ ಮರಿಸ್ವಾಮಿ ಅವರನ್ನು ಕಂಡು, ನೀನು ಮೊದಲು ನನ್ನ ಜೊತೆ ಇದ್ದೆಯಲ್ಲ, ಬಾ ಎಂದು ಕರೆದಿದ್ದಾರೆ. ಆದರೆ, ನಾನು ಜೆ.ಡಿ.ಎಸ್.ನಲ್ಲಿದ್ದೇನೆ ಬರಲ್ಲ ಎಂದು ಮರಿಸ್ವಾಮಿ ಹೇಳಿದ್ದಾರೆ.

ಆಗ ಸಿ.ಎಂ. ಸರಿ ನೀನು ಬರಬೇಡ, ವೋಟು ಹಾಕು ಎಂದು ಹೇಳಿದ್ದು, ಇದಕ್ಕೆ ನಿರಾಕರಿಸಿದ ಮರಿಸ್ವಾಮಿ, ನಾನು ಜೆ.ಡಿ.ಎಸ್.ಗೆ ವೋಟು ಹಾಕ್ತೀನಿ ಎಂದು ಅಲ್ಲೇ ಹೇಳಿದ್ದಾರೆ.

ಹೀಗೆ ಮುಖ್ಯಮಂತ್ರಿಯವರೇ ಕರೆದ್ರೂ ಹೋಗದ ಮರಿಸ್ವಾಮಿ ಅವರ ಬಗ್ಗೆ ತಿಳಿದ ಜೆ.ಡಿ.ಎಸ್. ನಾಯಕ ಹೆಚ್.ಡಿ. ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತಹ ನಿಷ್ಠಾವಂತ ಕಾರ್ಯಕರ್ತರಿಂದಲೇ ಜೆ.ಡಿ.ಎಸ್. ಅಧಿಕಾರಕ್ಕೆ ಬರಲಿದೆ ಎಂದು ಮೈಸೂರಿನಲ್ಲಿ ನಡೆದ ಜೆ.ಡಿ.ಎಸ್.–ಬಿ.ಎಸ್.ಪಿ. ಸಮಾವೇಶದಲ್ಲಿ ಅವರು ಹೇಳಿದ್ದಾರೆ.

ಮರಿಸ್ವಾಮಿ ಅವರು ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಅಂತಹ ನಿಷ್ಠಾವಂತ ಕಾರ್ಯಕರ್ತರು ನಮ್ಮ ಪಕ್ಷದಲ್ಲಿದ್ದಾರೆ. ಅವರ ಶ್ರಮದಿಂದಲೇ ಪಕ್ಷ ಅಧಿಕಾರಕ್ಕೆ ಬರಲಿದೆ. ಅಂತಹ ನಿಷ್ಠಾವಂತ ಕಾರ್ಯಕರ್ತರನ್ನು ನಾವೆಂದೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...