alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕಾರಣಿಗಳಿಗೆ ಗೂಬೆಯಿಂದ ಸಿಗುತ್ತಾ ಸಕ್ಸಸ್…? ಬಯಲಾಯ್ತು ರಹಸ್ಯ

ಚಾಮರಾಜನಗರ: ಯಶಸ್ಸು ಗಳಿಸಲು ಗೂಬೆ ಸಹಕಾರಿಯಾಗುತ್ತದೆ ಎಂಬ ನಂಬಿಕೆ ಹುಟ್ಟು ಹಾಕಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಗೂಬೆಗಳನ್ನು ಹಿಡಿದು, ದುಬಾರಿ ಬೆಲೆಗೆ ಮಾರುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಕೆಲವು ರಾಜಕಾರಣಿಗಳು ಅದೃಷ್ಟ ತರುವ ಗೂಬೆಯ ಮೊರೆ ಹೋಗುತ್ತಿದ್ದಾರೆ. ಗೂಬೆಯನ್ನು ಮನೆಯಲ್ಲಿ ಸಾಕಿದರೆ ಸಕ್ಸಸ್ ಸಿಗುತ್ತೆ, ಅದೃಷ್ಟ ಬರುತ್ತೆ ಎಂಬ ಭಾವನೆಯಿಂದ ಗೂಬೆಗಳ ಖರೀದಿಗೆ ಮುಂದಾಗಿದ್ದಾರೆ.

ಹೀಗಾಗಿ ಗೂಬೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಗೂಬೆಗಳ ಮಾರಾಟ ನಡೆಯುತ್ತಿರುವುದು ಬಯಲಾಗಿದೆ.

ಗೂಬೆಗಳ ಮಾರಾಟಕ್ಕೆ ಮುಂದಾಗಿದ್ದ ಇಬ್ಬರನ್ನು ಅರಣ್ಯ ಸಂಚಾರ ದಳದ ಸಿಬ್ಬಂದಿ ಹಾಗೂ ಕೊಳ್ಳೆಗಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಗ್ಗಲಿಗುಂಡಿ ಗ್ರಾಮದ ಮಾದೇಶ್, ರಂಗಸ್ವಾಮಿ ಬಂಧಿತರಾಗಿದ್ದು, ಅವರಿಂದ ಮಾರಾಟಕ್ಕೆ ತಂದಿದ್ದ ಗೂಬೆ ವಶಕ್ಕೆ ಪಡೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...