alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನ್ ನಲ್ಲಿ ಲೈವ್ ಬಂದ ಜೈಲಿನಲ್ಲಿರುವ ಅಸಾರಾಮ್ ಬಾಪು

ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಜೈಲು ಸೇರಿ ಎರಡು ದಿನವಾಗ್ತಿದೆ. ಆಗ್ಲೇ ಸಾಮಾಜಿಕ ಜಾಲತಾಣದಲ್ಲಿ ಅಸಾರಾಮ್ ಬಾಪು ಕಾಣಿಸಿಕೊಂಡಿದ್ದಾನೆ. ಅಸಾರಾಮ್ ಫೋಟೋ ಇರುವ ಪ್ರವಚನದ  ಆಡಿಯೋ ವೈರಲ್ ಆಗಿದೆ.

ಮೊದಲು ಶರದ್ ಹಾಗೂ ಶಿಲ್ಪಿಯನ್ನು ಹೊರಗೆ ತರ್ತೆನೆ. ನಂತ್ರ ನಾನು ನಿಮ್ಮ ಮುಂದೆ ಬರ್ತೇನೆ ಎಂದು ಬಾಪು ಹೇಳಿದ್ದಾನೆ. ಬಾಪು ಪ್ರವಚನ ಬರುತ್ತೆ ಎನ್ನುವ ಬಗ್ಗೆ ಫೇಸ್ಬುಕ್ ನಲ್ಲಿ ಮೊದಲೇ ತಿಳಿಸಲಾಗಿತ್ತು. ಅಸಾರಾಮ್ ಬಾಪು ಮಂಗಳಮಯ ಆ್ಯಪ್ ಹಾಗೂ ಫೇಸ್ಬುಕ್ ನಲ್ಲಿ ಆಡಿಯೋ ವೈರಲ್ ಆಗಿತ್ತು. ಒಂದು ಗಂಟೆ ನಂತ್ರ ಆಡಿಯೋವನ್ನು ಡಿಲಿಟ್ ಮಾಡಲಾಗಿದೆ.

ಇದು ಜೈಲಿನಲ್ಲಿ ರೆಕಾರ್ಡ್ ಆಗಿದ್ದಲ್ಲ. ಆಶ್ರಮದಲ್ಲಿ 17 ಸೆಕೆಂಡ್ ಮಾತನಾಡಿದ್ದ. ಅದ್ರ ಆಡಿಯೋ ಇದು ಎಂದು ಜೈಲಧಿಕಾರಿಗಳು ಹೇಳಿದ್ದಾರೆ. ಖೈದಿಗಳಿಗೆ ತಿಂಗಳಲ್ಲಿ 80 ನಿಮಿಷಗಳ ಕಾಲ ಫೋನ್ ನಲ್ಲಿ ಮಾತನಾಡುವ ಅವಕಾಶವಿರುತ್ತದೆ. ಫೋನ್ ನಲ್ಲಿ ಅಸಾರಾಮ್ ಮಾತನಾಡಿದ ಸಂಗತಿಯನ್ನು ರೆಕಾರ್ಡ್ ಮಾಡಿಕೊಂಡಿರುವ ಸಾಧ್ಯತೆಯೂ ಇದೆ. ಇದು ಜೈಲಿನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಲಿದ್ದು,ಪರಿಶೀಲನೆ ನಡೆಸುವುದಾಗಿ ಜೈಲಧಿಕಾರಿಗಳು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...