alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಚ್.ಡಿ. ರೇವಣ್ಣ ಕ್ಷೇತ್ರದಲ್ಲಿ ನಡೆದಿದೆ ಇಂತಹ ಘಟನೆ

ಹಾಸನ: ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸ್ಪರ್ಧಿಸಿದ್ದು, ಕಾಂಗ್ರೆಸ್ ನಿಂದ ಸಿ.ಎಂ. ಆಪ್ತ ಬಾಗೂರು ಮಂಜೇಗೌಡ ಕಣಕ್ಕಿಳಿದಿದ್ದಾರೆ.

ಕಾಂಗ್ರೆಸ್ ನಿಂದ ಖಾಸಗಿ ವಾಹನಗಳಿಗೆ ‘ಪೊಲೀಸ್ ವಾಹನ’ ಎಂದು ಸ್ಟಿಕ್ಕರ್ ಅಂಟಿಸಿ ಹಣ ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ರೇವಣ್ಣ ಅವರ ಪುತ್ರ, ಜೆ.ಡಿ.ಎಸ್. ಮುಖಂಡ ಪ್ರಜ್ವಲ್ ರೇವಣ್ಣ ಈ ಆರೋಪ ಮಾಡಿದ್ದಾರೆ. ಖಾಸಗಿ ವಾಹನಕ್ಕೆ ಸ್ಟಿಕ್ಕರ್ ಅಂಟಿಸಿ ಹಣ ಸಾಗಿಸಲಾಗಿದೆ ಎಂದು ದೂರಿದ್ದಾರೆ.

ದಾಖಲೆ ಸರಿ ಇದ್ದರೂ ಖಾಸಗಿ ವಾಹನವನ್ನು ವಶಕ್ಕೆ ಪಡೆದ ಅಧಿಕಾರಿಗಳು 4 ದಿನದ ಬಳಿಕ ಚಾಲಕನಿಗೆ ನೀಡಿದ್ದಾರೆ. ವಾಹನಕ್ಕೆ ಸ್ಟಿಕರ್ ಹಚ್ಚಿರುವ ಗುರುತು ಕಂಡು ಬಂದಿದೆ. ಇದರಲ್ಲಿ ಹಣ ಸಾಗಿಸಲಾಗಿದೆ ಎಂಬುದು ಪ್ರಜ್ವಲ್ ರೇವಣ್ಣರ ಆರೋಪವಾಗಿದೆ. ಚಾಲಕ ಕೂಡ ಸಾರಿಗೆ ಅಧಿಕಾರಿಗಳು ವಾಹನವನ್ನು 4 ದಿನಗಳ ಬಳಿಕ ಕೊಟ್ಟಿದ್ದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...