alex Certify
ಕನ್ನಡ ದುನಿಯಾ       Mobile App
       

Kannada Duniya

‘ತ್ರಿವಳಿಗಳಿಗೆ ಬೆಂಗಳೂರು ಒಪ್ಪಿಸಿ ಕುಖ್ಯಾತಿ ತಂದ ಸಿ.ಎಂ.’

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾಯುಕ್ತಕ್ಕೆ ಬೀಗವನ್ನು ಹಾಕಿದ್ದು, ತಾವೇ ಕ್ಯಾರೆಕ್ಟರ್ ಸರ್ಟಿಫಿಕೆಟ್ ರೆಡಿ ಮಾಡಿಕೊಂಡು ಸೂಟ್ ಕೇಸ್ ನಲ್ಲಿಟ್ಟುಕೊಂಡಿದ್ದಾರೆ. ಏನಾದ್ರೂ ಆರೋಪ ಮಾಡಿದ್ರೆ ಆ ಸರ್ಟಿಫಿಕೆಟ್ ತೋರಿಸ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ಬಸವನಗುಡಿಯಲ್ಲಿ ಆಯೋಜಿಸಿರುವ ಬಿ.ಜೆ.ಪಿ. ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯನವರು ವೋಟ್ ಬ್ಯಾಂಕ್ ಆಸೆಗಾಗಿ ವಿಶ್ವವಿಖ್ಯಾತ ಬೆಂಗಳೂರನ್ನು ತ್ರಿವಳಿ ನಾಯಕರ ಕೈಗೆ ಒಪ್ಪಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಸಿದ್ಧರಾಮಯ್ಯ ಅವರಿಗೆ ಬೆಂಗಳೂರಿನ ಮೇಲೆ ಅದೆಷ್ಟು ದ್ವೇಷ ಇದೆ ಎಂದರೆ, ತ್ರಿವಳಿ ನಾಯಕರಿಗೆ ಬೆಂಗಳೂರನ್ನು ಒಪ್ಪಿಸಿ ಕುಖ್ಯಾತಿ ತಂದಿದ್ದಾರೆ. ಈ ನಗರವನ್ನು ಹದಗೆಡಿಸಿದ್ದಾರೆ. ಪರಸ್ಪರ ಜಿದ್ದಿಗೆ ಬಿದ್ದವರಂತೆ ಬೆಂಗಳೂರನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ವಲ್ಪ ಮಳೆ ಬಂದರೆ ಬೆಂಗಳೂರು ಮುಳುಗಡೆ ನಗರವಾಗಿ ಮಾರ್ಪಡುತ್ತದೆ. ಮೂಲ ಸೌಕರ್ಯವನ್ನು ಒದಗಿಸಬೇಕಿದ್ದ ಸರ್ಕಾರ ಸೂಟ್ ಕೇಸ್ ವ್ಯವಹಾರದಲ್ಲಿ ಮುಳುಗಿದೆ. ನಾವು ನಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ವಚನಗಳನ್ನು ಪೂರೈಸಲು ಮೊದಲ ಸಂಪುಟ ಸಭೆಯಲ್ಲಿ ನೀಲನಕ್ಷೆಯನ್ನು ತಯಾರಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...