alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರ್ಯಾಕ್ಟರ್ ಹುಡುಕಲು ಹೆಲಿಕಾಪ್ಟರ್ ಬಳಕೆ..!

image

ಸಾಮಾನ್ಯವಾಗಿ ಏನಾದರೂ ಕಳೆದುಹೋದಾಗ ಹುಡುಕಾಟ ನಡೆಸಿದರೂ, ಸಿಗದಿದ್ದಾಗ ಪೊಲೀಸರ ಮೊರೆ ಹೋಗುತ್ತಾರೆ. ಅಪರೂಪದ ವಸ್ತುಗಳು ಕಳೆದರಂತೂ ಸಿಗುವ ತನಕ ನೆಮ್ಮದಿಯೇ ಇರಲ್ಲ. ಹೀಗೆ ಅಪರೂಪದ ಟ್ರ್ಯಾಕ್ಟರ್ ವೊಂದನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಪೊಲೀಸರ ಮೊರೆ ಹೋಗಿದ್ದಾನೆ.

ಲಂಡನ್ ನಲ್ಲಿ ಈ ವ್ಯಕ್ತಿಯ ದುಬಾರಿ ಬೆಲೆಯ ಟ್ರ್ಯಾಕ್ಟರ್ ಅನ್ನು ಕಳ್ಳನೊಬ್ಬ ಕದ್ದು ಬೇರೆ ಕಡೆಗೆ ಸಾಗಿಸಿದ್ದಾನೆ. ಕಳೆದುಹೋಗಿದ್ದ ದುಬಾರಿ ಬೆಲೆಯ ಟ್ರ್ಯಾಕ್ಟರ್ ಹುಡುಕಲು ಅವರು ಏನೆಲ್ಲಾ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. 30 ಲಕ್ಷ ರೂ ಬೆಲೆಯ ಕೇಸ್ ಐಹೆಚ್ ಪೂಮಾ 160 ಹೆಸರಿನ ಈ ದುಬಾರಿ ಬೆಲೆಯ ಟ್ರ್ಯಾಕ್ಟರ್ ಅನ್ನು ಇಂಗ್ಲೆಂಡ್ ನ ಸೇಂಟ್ ಲಾರೆನ್ಸ್ ಫಾರ್ಮ್ ನಿಂದ ಕಳ್ಳನೊಬ್ಬ ಅಪಹರಿಸಿದ್ದ. ಅದನ್ನು ಪಕ್ಕದ ದೇಶ ಕೇಂಬ್ರಿಡ್ಜ್ ಶೇರ್ ಎಂಬಲ್ಲಿ ಬಚ್ಚಿಟ್ಟಿದ್ದು, ಪೊಲೀಸರು ಎಷ್ಟೆಲ್ಲಾ ಹುಡುಕಾಟ ನಡೆಸಿದರೂ ಟ್ರ್ಯಾಕ್ಟರ್ ಸಿಗಲೇ ಇಲ್ಲ.

ಕೊನೆಗೆ ಈ ಟ್ರ್ಯಾಕ್ಟರ್ ಹುಡುಕಲು ಹೆಲಿಕಾಪ್ಟರ್ ಬಳಸಲಾಗಿದೆ. ಹೌದು, ಇಂಗ್ಲೆಂಡ್ ಮತ್ತು ಪಕ್ಕದ ದೇಶ ಕೇಂಬ್ರಿಡ್ಜ್ ಶೇರ್ ನ ವಿಸ್ಬೇಕ್ ನಗರದಲ್ಲಿ ಹೆಲಿಕಾಪ್ಟರ್ ಬಳಿಸಿ ಹುಡುಕಾಟ ನಡೆಸಿದ್ದಾರೆ. ಕೊನೆಗೂ ಟ್ರ್ಯಾಕ್ಟರ್ ಪತ್ತೆಯಾಗಿದೆ. ಆದರೆ ಅದು ಬಳಕೆಗೆ ಬಾರದಂತೆ ಹಾಳಾದ ರೀತಿಯಲ್ಲಿದ್ದು, ರಿಪೇರಿಗೆ ಲಕ್ಷಾಂತರ ರೂ. ಹಣ ವ್ಯಯ ಮಾಡಬೇಕಿದೆ. ಕಳ್ಳನನ್ನು ಬಂಧಿಸಲಾಗಿದೆಯಾದರೂ ಅದಕ್ಕಿಂತ ಹೆಚ್ಚು ಟ್ರ್ಯಾಕ್ಟರ್ ಹುಡುಕಲು ಹೆಲಿಕಾಪ್ಟರ್ ಬಳಸಿದ್ದು, ಸುದ್ದಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...