alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ತಿಮ್ಮಪ್ಪನ ಬಳಿಯಿರುವ ಭೂಮಿಯೆಷ್ಟು ಗೊತ್ತಾ..?

2680tirumala

ಹೈದರಾಬಾದ್: ತಿರುಪತಿ ತಿಮ್ಮಪ್ಪ ಕೇವಲ ಒಡವೆ ಹಾಗೂ ಹಣದಲ್ಲಷ್ಟೇ ಶ್ರೀಮಂತನಲ್ಲ. ಭೂಮಿಯ ಒಡೆತನದಲ್ಲೂ ಹಿಂದೆ ಬಿದ್ದಿಲ್ಲ. ಭಾರತದ ಶ್ರೀಮಂತ ದೇವರು ತಿಮ್ಮಪ್ಪ ಸಾವಿರಾರು ಎಕರೆ ಭೂಮಿಯ ಒಡೆತನ ಹೊಂದಿದ್ದಾನೆ.

ಟಿಟಿಡಿ ಹೊಂದಿರುವ ಭೂಮಿಯ ವಿವರವನ್ನು ತಿರುಪತಿ ತಿರುಮಲದ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದ್ದು, ರಾಷ್ಟ್ರದ 9 ರಾಜ್ಯ ಹಾಗೂ ನೆರೆ ರಾಷ್ಟ್ರ ನೇಪಾಳದಲ್ಲಿ ತಿರುಪತಿ ತಿಮ್ಮಪ್ಪನಿಗೆ ಸೇರಿದ ಸುಮಾರು 6 ಸಾವಿರ ಎಕರೆ ಭೂಮಿ ಇದೆ ಎಂದು ತಿಳಿಸಲಾಗಿದೆ.

ಈ ಪೈಕಿ ಆಂಧ್ರ ಪ್ರದೇಶ ಒಂದರಲ್ಲೇ 5,100 ಎಕರೆ ಹಾಗೂ ತೆಲಂಗಾಣದಲ್ಲಿ 126 ಎಕರೆ ಭೂಮಿ ಇದೆ. ಇದೆಲ್ಲವೂ ತಿರುಪತಿ ತಿಮ್ಮಪ್ಪನಿಗೆ ಸೇರಿದ್ದರೂ ಬೇರೆ ಬೇರೆ ಹೆಸರುಗಳಲ್ಲಿ ರಿಜಿಸ್ಟರ್ ಆಗಿದೆ. ಈ ಭೂಮಿಯ ಬಹು ಪಾಲು ಕೃಷಿಗೆ ಬಳಕೆಯಾಗುತ್ತಿದೆ ಎಂದು ಹೇಳಲಾಗಿದೆ.

ಆದರೆ ಇದರಿಂದ ದೇವಸ್ಥಾನಕ್ಕೆ ನಿರೀಕ್ಷಿತ ಆದಾಯವೇನೂ ಬರುತ್ತಿಲ್ಲ. ಅಲ್ಲದೇ ತಿರುಪತಿ ತಿಮ್ಮಪ್ಪನಿಗೆ ಸೇರಿದ ಬಹಳಷ್ಟು ಭೂಮಿಯನ್ನು ಒತ್ತುವರಿ ಮಾಡಲಾಗಿದ್ದರೆ, ಸ್ವಲ್ಪ ಭೂಮಿಯನ್ನು ಸರ್ಕಾರಿ ಹಾಗೂ ಸಾಮಾಜಿಕ ಕಾರ್ಯಗಳಿಗಾಗಿ ಬಿಟ್ಟು ಕೊಡಲಾಗಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...