alex Certify
ಕನ್ನಡ ದುನಿಯಾ       Mobile App
       

Kannada Duniya

‘ನಮ್ಮ ಅಪ್ಪನಾಣೆ JDS ಗೆಲ್ಲೋದು 15 ಸೀಟು ಮಾತ್ರ, ಅಧಿಕಾರಕ್ಕೆ ಬಂದ್ರೆ ರಾಜ್ಯವನ್ನೇ ಬಿಡ್ತೇನೆ’

ಚಿತ್ರದುರ್ಗ: ಮುಖ್ಯಮಂತ್ರಿಯವರು ಮಾತು ಮಾತಿಗೂ ಅವರಪ್ಪನಾಣೆ ಕುಮಾರಸ್ವಾಮಿ ಗೆಲ್ಲಲ್ಲ ಎನ್ನುತ್ತಾರೆ. ಅವರಿಗೆ ಅಪ್ಪನಿಲ್ಲವೇ? ಬೇಕಾದ್ರೆ ಅವರಪ್ಪನಾಣೆ ಮಾಡಲಿ ಎಂದು ಜೆ.ಡಿ.ಎಸ್. ನಾಯಕ ಹೆಚ್.ಡಿ. ಕುಮಾರಸ್ವಾಮಿ ಹೇಳಿರುವುದಕ್ಕೆ ಕಾಂಗ್ರೆಸ್ ಮುಖಂಡ ಜಮೀರ್ ಅಹಮ್ಮದ್ ಖಾನ್ ತಿರುಗೇಟು ನೀಡಿದ್ದಾರೆ.

ಇತ್ತೀಚೆಗಷ್ಟೇ ಜೆ.ಡಿ.ಎಸ್. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿರುವ ಜಮೀರ್ ಅಹಮ್ಮದ್ ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಮಾತನಾಡಿ, ನಮ್ಮಪ್ಪಾಣೆ, ನಮ್ಮ ತಾಯಾಣೆ ಜೆ.ಡಿ.ಎಸ್. 15 ಸ್ಥಾನಗಳ ಮೇಲೆ ಗೆಲ್ಲೋದೇ ಇಲ್ಲ ಎಂದು ಹೇಳಿದ್ದಾರೆ.

ಜೆ.ಡಿ.ಎಸ್. ಅಧಿಕಾರಕ್ಕೆ ಬರುವುದೇ ಇಲ್ಲ. ಒಂದು ವೇಳೆ ಜೆ.ಡಿ.ಎಸ್. ಅಧಿಕಾರಕ್ಕೆ ಬಂದಲ್ಲಿ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಮಾತ್ರವಲ್ಲ, ರಾಜ್ಯವನ್ನೇ ಬಿಟ್ಟು ಹೋಗ್ತೇನೆ ಎಂದು ಸವಾಲ್ ಹಾಕಿದ್ದಾರೆ.

ಸಿದ್ಧರಾಮಯ್ಯ ಹುಲಿ ಇದ್ದಂತೆ ಎಂದು ಹೇಳಿದ ಜಮೀರ್ ಅಹಮ್ಮದ್, ಹೆಚ್.ಡಿ. ಕುಮಾರಸ್ವಾಮಿ ಭಯದಿಂದ ಚನ್ನಪಟ್ಟಣಕ್ಕೆ ವಲಸೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...