alex Certify
ಕನ್ನಡ ದುನಿಯಾ       Mobile App
       

Kannada Duniya

ಜಮೀರ್ ಸವಾಲಿಗೆ ಹೀಗಿದೆ ಗೌಡರ ಉತ್ತರ

hdd-hdd-jds

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆ.ಡಿ.ಎಸ್. ಗೆದ್ದರೆ, ತಲೆ ಕತ್ತರಿಸಿಕೊಳ್ಳುವೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.

ಈ ಸವಾಲಿಗೆ ಉತ್ತರ ನೀಡಲು ಜೆ.ಡಿ.ಎಸ್. ನಾಯಕರು ಸಜ್ಜಾಗಿದ್ದು, ಒಂದೇ ವಾರದಲ್ಲಿ 2 ನೇ ಬಾರಿಗೆ ಚಾಮರಾಜಪೇಟೆಯಲ್ಲಿ ಸಮಾವೇಶ ನಡೆಸಲಿದ್ದಾರೆ.

ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಜಮೀರ್ ಅಹ್ಮದ್ ಸಂಬಂಧ ಹಳಸಿದ್ದು, ಜಮೀರ್ ಸೇರಿ 7 ಮಂದಿ ಶಾಸಕರನ್ನು ಅಮಾನತು ಮಾಡಲಾಗಿದೆ.

ಇದಾದ ನಂತರದಲ್ಲಿ ಜೆ.ಡಿ.ಎಸ್. ಚಾಮರಾಜಪೇಟೆಯಲ್ಲಿ ಠೇವಣಿ ಉಳಿಸಿಕೊಳ್ಳಲಿ. ಒಂದು ವೇಳೆ ಗೆದ್ದರೆ ತಲೆ ಕತ್ತರಿಸಿಕೊಳ್ಳುವೆ ಎಂದು ಜಮೀರ್ ಅಹ್ಮದ್ ಸವಾಲ್ ಹಾಕಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಜೆ.ಡಿ.ಎಸ್. ವರಿಷ್ಠ ದೇವೇಗೌಡರು ಕಳೆದ ಶುಕ್ರವಾರ ಚಾಮರಾಜಪೇಟೆಯಲ್ಲಿ ಸಮಾವೇಶ ನಡೆಸಿದ್ದರು. ಈಗ ಮತ್ತೆ ಚಾಮರಾಜಪೇಟೆಯಲ್ಲಿ ಸಮಾವೇಶ ನಡೆಸಲು ಮುಂದಾಗಿದ್ದಾರೆ.

ಜಮೀರ್ ಅಹ್ಮದ್ ಸವಾಲಿಗೆ ತಕ್ಕ ಉತ್ತರ ನೀಡಲು ಹಾಗೂ ಪಕ್ಷವನ್ನು ಗೆಲ್ಲಿಸುವ ಕುರಿತಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...