alex Certify
ಕನ್ನಡ ದುನಿಯಾ       Mobile App
       

Kannada Duniya

ಸಿದ್ದರಾಮಯ್ಯ ಬಳಸುತ್ತಿದ್ದ ಫಾರ್ಚುನರ್ ಕಾರಿಗೆ ಜಮೀರ್ ಬೇಡಿಕೆ

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಿರುವ ಜಮೀರ್ ಅಹಮದ್, ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಬಳಸುತ್ತಿದ್ದ ಫಾರ್ಚುನರ್ ಕಾರ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ವಿಕಾಸಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ಕುಮಾರಸ್ವಾಮಿಯವರು ಫೇಮಸ್ ಆಗಿದ್ದಾರೆ. ಆದರೆ ನಮ್ಮಂತವರು ಮಂತ್ರಿಯಾಗಿದ್ದೇವೆಂದು ತಿಳಿಯುವುದು ದೊಡ್ಡ ಗಾಡಿಯಲ್ಲಿ ಓಡಾಡಿದರೆ ತಾನೇ ಎಂದು ಪ್ರಶ್ನಿಸಿದರಲ್ಲದೆ ಸಿದ್ದರಾಮಯ್ಯ ಅವರು ಬಳಸುತ್ತಿದ್ದ ಫಾರ್ಚುನರ್ ಕಾರ್ ನೀಡುವಂತೆ ಕೇಳಿದ್ದೇನೆ ಎಂದು ತಿಳಿಸಿದರು.

ತಮ್ಮ ವಿರುದ್ಧ ತನ್ವೀರ್ ಸೇಟ್ ಮಾಡಿರುವ ಆರೋಪದ ಕುರಿತಂತೆ ಪ್ರತಿಕ್ರಿಯಿಸಿದ ಜಮೀರ್ ಅಹಮದ್, ನಾನು ಮುಸ್ಲಿಂ ಜನಾಂಗದ ಮುಖಂಡ ಎಂಬುದನ್ನು ಪರಿಗಣಿಸಿಯೇ ಸಚಿವ ಸ್ಥಾನ ನೀಡಲಾಗಿದೆ. ಚುನಾವಣೆಯಲ್ಲಿ ತನ್ವೀರ್ ಸೇಟ್ ಸೋಲಿಸಲು ನಾನು ಪ್ರಯತ್ನ ಮಾಡಿದ್ದರೆ ಅದನ್ನು ಹೈಕಮಾಂಡ್ ಮುಂದೆ ಆಗಲೇ ತಿಳಿಸಬೇಕಿತ್ತು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...