alex Certify
ಕನ್ನಡ ದುನಿಯಾ       Mobile App
       

Kannada Duniya

ಸಿದ್ದರಾಮಯ್ಯ ಬಳಸಿದ್ದ ಕಾರಿನ ಬಳಿಕ ತನ್ವೀರ್ ಸೇಠ್ ಇದ್ದ ಮನೆಗೆ ಬೇಡಿಕೆ ಇಟ್ಟ ಜಮೀರ್

ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬಳಸುತ್ತಿದ್ದ ಫಾರ್ಚುನರ್ ಕಾರಿಗೆ ಬೇಡಿಕೆ ಇಟ್ಟು ಅದನ್ನು ಗಿಟ್ಟಿಸಿಕೊಂಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್, ಈಗ ತನ್ವೀರ್ ಸೇಠ್ ಸಚಿವರಾಗಿದ್ದಾಗ ವಾಸಿಸುತ್ತಿದ್ದ ಬಂಗಲೆಗೆ ಬೇಡಿಕೆ ಇಟ್ಟಿದ್ದಾರೆ.

ಸ್ಯಾಂಕಿ ರಸ್ತೆಯಲ್ಲಿರುವ 30 ಎ ಬಂಗಲೆಯನ್ನು ತಮಗೆ ನೀಡುವಂತೆ ಜಮೀರ್ ಅಹಮದ್ ಖಾನ್ ಮನವಿ ಮಾಡಿದ್ದು, ಸಚಿವ ಜಿ.ಟಿ. ದೇವೇಗೌಡರಿಗೆ ಈ ಬಂಗಲೆ ಮಂಜೂರಾಗಿತ್ತಾದರೂ ಅವರು ಅಲ್ಲಿಗೆ ತೆರಳಲು ನಿರಾಕರಿಸಿದ್ದರು.

ಹೀಗಾಗಿ ಈ ನಿವಾಸ ಜಮೀರ್ ಅಹಮದ್ ಖಾನ್ ಅವರಿಗೆ ಮಂಜೂರಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಜಮೀರ್ ಅಹಮದ್ ಖಾನ್ ಅವರು ಈ ಹಿಂದೆ ಫಾರ್ಚುನರ್ ಕಾರಿಗೆ ಬೇಡಿಕೆ ಇಟ್ಟಿದ್ದ ಕುರಿತು ಕಿಡಿ ಕಾರಿದ್ದ ಸಂಸದೆ ಶೋಭಾ ಕರಂದ್ಲಾಜೆ, ಸರ್ಕಾರ ಇದಕ್ಕೆ ಒಪ್ಪಬಾರದು ಎಂದು ಆಗ್ರಹಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...